×
Ad

ರಾಜ್ಯದಲ್ಲಿ 2ನೇ ದಿನದ ಭಾರತ್ ಜೋಡೋ ಪಾದಯಾತ್ರೆ: ರಾಹುಲ್ ಜೊತೆ ಸಿದ್ದರಾಮಯ್ಯ, ಡಿಕೆಶಿ ನಡಿಗೆ

Update: 2022-10-01 09:49 IST

ಭಾರತ್ ಜೋಡೋ ಪಾದಯಾತ್ರೆಯ ಎರಡನೇ ದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ  ತೊಂಡವಾಡಿ ಗ್ರಾಮದಿಂದ ರಾಹುಲ್ ಗಾಂಧಿಯವರೊಂದಿಗೆ ಸಿದ್ದರಾಮಯ್ಯ ಅವರು ನಡಿಗೆ ಆರಂಭಿಸಿದರು.

ಪಾದಯಾತ್ರೆ ಮೈಸೂರು ಜಿಲ್ಲೆಯ ಗಡಿ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಸ್ವಾಗತ ಕೋರಿದರು. ವಿವಿಧ ಕಲಾ ತಂಡಗಳು ಪಾದಯಾತ್ರೆಯಲ್ಲಿ ಭಾಗವಹಿಸಿತು. 

ಬೆಳಿಗ್ಗೆ ಸುಮಾರು 15 ಕಿಮೀ ಪಾದಯಾತ್ರೆ ನಡೆಸಿ,  ಸಂಜೆ 4 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭಗೊಳ್ಳಲಿದೆ. ಸಂಜೆ 7 ಗಂಟೆಗೆ ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರಕ್ಕೆ ಯಾತ್ರೆ ತಲುಪಲಿದೆ. 
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News