ಭಾರತ್ ಜೋಡೊ ಯಾತ್ರೆಯಲ್ಲಿ 'PayCM' ಟೀಶರ್ಟ್ ಧರಿಸಿದ್ದ ಯುವಕನಿಗೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ

Update: 2022-10-01 13:47 GMT

ಬೆಂಗಳೂರು: ಚಾಮರಾಜನಗರದಲ್ಲಿ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದ 'ಪೇಸಿಎಂ' ಟೀ ಶರ್ಟ್ ಧರಿಸಿದ ಯುವಕನೋರ್ವನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. 

ವಿಜಯಪುರ ಮೂಲದ ಅಕ್ಷಯ್ ಕುಮಾರ್ ಬಂಧಿತ ಯುವಕನಾಗಿದ್ದು,  ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ಈತನನ್ನು ಬಂಧಿಸುವ ವೇಳೆ ನರೆದಿದ್ದ ಕಾಂಗ್ರೆಸ್ ಕರ್ಯಕರ್ತರ ನಡುವೆ ಆತ ಧರಿಸಿದ್ದ ಪೇಸಿಎಂ ಟೀಶರ್ಟ್ ಬಿಚ್ಚಿಸಿ, ಹಲ್ಲೆ ನಡೆಸಿರುದ್ದಾರೆ. ಈ ಕುರಿತ ವಿಡಿಯೋ ಒಂದು ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಯುವಜನ ಭಾರತ್ ಜೋಡೊ ಯಾತ್ರೆಯಲ್ಲಿ  'PayCM' ಟೀ ಶರ್ಟ್ ಧರಿಸಿದ ಒಂದೇ ಕಾರಣಕ್ಕೆ ಆತನಿಗೆ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಚಾಮರಾಜನಗರ: ಭಾರತ್ ಜೋಡೊ ಯಾತ್ರೆಯಲ್ಲಿ 'PayCM' ಟೀಶರ್ಟ್ ಧರಿಸಿದ್ದ ಯುವಕನ ಬಂಧನ

''#PayCm ಟಿ ಶರ್ಟ್ ಧರಿಸಿದ್ದ ನಮ್ಮ ಕಾರ್ಯಕರ್ತನ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿರುವುದು ಖಂಡನೀಯ. ಟಿ ಶರ್ಟ್ ಬಿಚ್ಚಿಸಿ ರಸ್ತೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು? ಇವರೇನು ಪೊಲೀಸರೊ ಅಥವಾ ಗೂಂಡಾಗಳೋ? ಹಲ್ಲೆ ನಡೆಸಿದ ಅಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಬೇಕು'' ಎಂದು ಕಾಂಗ್ರೆಸ್ ಕರ್ನಾಟಕ ಟ್ವಿಟರ್ ನಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ @DgpKarnataka ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ @JnanendraAraga ಅವರನ್ನು ಟ್ಯಾಗ್ ಮಾಡಿ ಒತ್ತಾಯಿಸಿದೆ. 

''ಬಿಜೆಪಿ #ಭಾರತ್ ಜೋಡೊ ಯಾತ್ರೆಯಲ್ಲೂ ತನ್ನ ದ್ವೇಷ ರಾಜಕೀಯ ಶುರು ಮಾಡಿದೆ. ಪೇಸಿಎಂ ಟೀ ಶರ್ಟ್ ಹಾಕ್ಕೊಂಡ್ ಬಂದಿರೋ ಕಾಂಗ್ರೇಸ್ ಕಾರ್ಯಕರ್ತ ಅಮಾಯಕ ಹುಡುಗನ ಮೇಲೆ ಪೊಲೀಸರು ಕೈ ಮಾಡಿದ್ದಾರೆ. ಇದಕ್ಕೆ ಗೃಹಸಚಿವ Araga Jnanendra ಅವರ ಆದೇಶ ಇತ್ತಾ..? ಅಲ್ಲದಿದ್ರೆ ಹೊಡೆದ ಪೊಲೀಸ್ ಅಧಿಕಾರಿಯೂ 40% ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರಾ? BJP Karnataka ದ್ವೇಷ ರಾಜಕೀಯಕ್ಕೆ ಕೊನೆಯೇ ಇಲ್ವಾ..?'' ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News