'ಪೇಸಿಎಂ ಆ್ಯಕ್ಷನ್‌ ಕಮಿಟಿ': ಬಿಜೆಪಿ ನಾಯಕರ ಕಾಲ್ಪನಿಕ ವಾಟ್ಸ್ ಆ್ಯಪ್‌ ಗ್ರೂಪ್‌ ರಚನೆ; ವಿಡಿಯೋ ವೈರಲ್‌

Update: 2022-10-01 16:35 GMT
Twitter/@suryamukundaraj

ಬೆಂಗಳೂರು: ರಾಜ್ಯ ಸರ್ಕಾರದ ಮೇಲಿರುವ 40% ಕಮಿಷನ್‌ ಆರೋಪದ ಹಿನ್ನೆಲೆಯಲ್ಲಿ ಶುರುವಾಗಿರುವ 'ಪೇಸಿಎಂ' ಅಭಿಯಾನ ವಿಭಿನ್ನ ಮಾದರಿಯಲ್ಲಿ ಸಾಗುತ್ತಿದೆ. ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್‌ ನಾಯಕರು ಸರ್ಕಾರದ ವಿರುದ್ಧ ಬಲವಾಗಿ ಬಳಸಿಕೊಳ್ಳುತ್ತಿದ್ದು, ಪೇಸಿಎಂ ಅಭಿಯಾನ ಮಟ್ಟ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ.

ಈ ನಡುವೆ, ಪೇಸಿಎಂ ಅಭಿಯಾನವನ್ನು ಮಟ್ಟ ಹಾಕುವ ಬಿಜೆಪಿ ನಾಯಕರ ಕಾಲ್ಪನಿಕ ವಾಟ್ಸ್‌ಆ್ಯಪ್‌ ಗ್ರೂಪ್‌ ಅನ್ನು ರಚಿಸಿ, ಸರ್ಕಾರವನ್ನು ಅಣಕಿಸಲಾಗಿದೆ. ‘ಪೇಸಿಎಂ ಆಕ್ಷನ್‌ ಕಮಿಟಿ’ (PayCM Action Committee) ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಬಿಜೆಪಿ ನಾಯಕರು ಚರ್ಚಿಸುತ್ತಿರುವಂತೆ ವಿಡಿಯೊ ರಚಿಸಲಾಗಿದೆ.

ಈ ಕಾಲ್ಪನಿಕ ಚರ್ಚೆಯಲ್ಲಿ ಪೇಸಿಎಂ ಕುರಿತಾದ ಚರ್ಚೆ ಮಾತ್ರವಲ್ಲದೆ, ಈಶ್ವರಪ್ಪ ಅವರ ಸಚಿವ ಸ್ಥಾನ, ಬಿವೈ ವಿಜಯೇಂದ್ರ ಅವರ ಜಾತಿ ಹಿನ್ನೆಲೆ, ಸರ್ಕಾರದ ಮೇಲೆ ಅಮಿತ್‌ ಶಾ ಅವರಿಗಿರುವ ಹಿಡಿತವನ್ನೂ ವಿಡಂಬನಾತ್ಮಕವಾಗಿ ಉಲ್ಲೇಖಿಸಲಾಗಿದೆ. ಪ್ರಧಾನಿ ಮೋದಿ ಅವರು ನವಿಲಿನೊಂದಿಗೆ ಫೋಟೋ ಶೂಟ್‌ ಮಾಡುವ ಬಗ್ಗೆಯೂ ವ್ಯಂಗ್ಯವಾಗಿ ಉಲ್ಲೇಖಿಸಲಾಗಿದೆ. 

ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದು, ವಕೀಲರೂ ಆಗಿರುವ ಕೆಪಿಸಿಸಿ ಮಾಧ್ಯಮ ವಕ್ತಾರ ಸೂರ್ಯ ಮುಕುಂದರಾಜ್‌ ಈ ವಿಡಿಯೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News