ರಾಹುಲ್ ಅಕ್ಕಪಕ್ಕ ಇರುವವರೆಲ್ಲಾ ಜಾಮೀನು ಮೇಲೆ ಇರುವವರು: ಸಚಿವ ಎಸ್.ಟಿ.ಸೋಮಶೇಖರ್

Update: 2022-10-01 16:51 GMT

ಮೈಸೂರು, ಅ.1:ಭಾರತ್ ಜೋಡೋ ಯಾತ್ರೆಗೆ ಪೊಲೀಸರು ಸಂಪೂರ್ಣ ಭದ್ರತೆ ಒದಗಿಸಿದ್ದಾರೆ. ಪಾದಯಾತ್ರೆಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, 'ಕಾಂಗ್ರೆಸ್ ನವರ ಭಾರತ್ ಜೋಡೊಗೆ ನಮ್ಮದೇನೂ ಅಭ್ಯಂತರವಿಲ್ಲ, ಆದರೆ ಅನಾವಶ್ಯಕವಾಗಿ ಆರೋಪ ಮಾಡುವುದು ಸರಿಯಲ್ಲ. ರಾಹುಲ್ ಗಾಂಧಿ ಅವರ ಅಕ್ಕಪಕ್ಕ ಯಾರಿದ್ದಾರೆ? ಅವರೆಲ್ಲಾ ಬೇಲ್ ಮೇಲೆ ಇರುವವರು, ಕಾಂಗ್ರೆಸ್ ನವರು ಏನೂ ಸತ್ಯ ಹರಿಶ್ಚಂದ್ರರಾ? ಎಂದು ಪ್ರಶ್ನಿಸಿದರು.

ಆರೋಪ ಬಂದಾಕ್ಷಣ ಪೊಲೀಸ್ ಉನ್ನತ ಅಧಿಕಾರಿಗಳನ್ನೇ ಬಂಧಿಸಿದೆ. ಅದೇ ಕಾಂಗ್ರೆಸ್ ನವರು ಒಬ್ಬ ಪೇದೆಯನ್ನು ಕೂಡ ಬಂಧಿಸಲಿಲ್ಲ. 40% ಆರೋಪ ಮಾಡ್ತಾರಲ್ಲಾ ಅದರ ಒಂದೇಒಂದು ದಾಖಲೆ ಕೊಡ ಕೊಡಲಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಎಡಬಲ ಇರುವವರನ್ನೇ ಕೇಳಲಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ಪರ್ಸೆಂಟೆಜ್ ತೆಗೆದುಕೊಂಡಿದ್ದೀರಿ ಎಂದು? ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಬಾರದು ಎಂದರು. 

ಬಾಲಿಷ ಹೇಳಿಕೆಗಳನ್ನು ನೀಡಬಾರದು. ರಾಹುಲ್ ಗಾಂಧಿ ಅವರು ತಮ್ಮ ಎಡಬಲದಲ್ಲಿ ಇರುವವರ ಕತೆ ಮೊದಲು ತಿಳಿದುಕೊಳ್ಳಲಿ. ಅಕ್ಕಪಕ್ಕದವರ ಮಾತು ಕೇಳಿದರೆ ಭಾರತ್ ಜೋಡೋ ಪೂರ್ಣ ಆಗಲ್ಲ. ಮಾಹಿತಿ ತೆಗೆದುಕೊಂಡು ಮಾತನಾಡಿ. ಯಾರೂ ಬ್ಯಾನರ್ ಹರಿದಿಲ್ಲ.‌ ಹೆಜ್ಜೆಹೆಜ್ಜೆಗೂ ರಕ್ಷಣೆ ನೀಡುವಂತೆ ಸೂಚಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News