ದೇಶಕ್ಕೆ ಶಾಪವಾಗಿರುವ ಕಾಂಗ್ರೆಸ್‍ ನಿಷೇಧಿಸಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Update: 2022-10-03 13:12 GMT

ಬಾಗಲಕೋಟೆ, ಅ.3: ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಒಂದು ಶಾಪವಾಗಿದ್ದು, ಇದನ್ನು ನಿಷೇಧಿಸುವ ಅವಶ್ಯಕತೆ ಇದೆ ಎಂದು ಕೇಂದ್ರ ಮಾಜಿ ಸಚಿವ, ವಿಜಯಪುರ ನಗರ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.  

ಸೋಮವಾರ ಬಾಗಲಕೋಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಈ ಮೊದಲೇ ಕಾಂಗ್ರೆಸ್‍ನ್ನು ವಿಸರ್ಜಿಸುವಂತೆ ಹೇಳಿದ್ದರೂ ವಿಸರ್ಜಿಸಿಲ್ಲ. ಈಗಲಾದರೂ ದೇಶಕ್ಕೆ ಶಾಪವಾಗಿ ಪರಿಣಮಿಸಿರುವ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ತಿ ಹತಾಶರಾಗಿದ್ದಾರೆ. ಹೀಗಾಗಿ, ಆರೆಸ್ಸೆಸ್ಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆರೆಸ್ಸೆಸ್ಸ್ ದೇಶಭಕ್ತ ಸಂಘಟನೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೇಶಭಕ್ತರನ್ನು ತಯಾರು ಮಾಡುವಂತಹ ಕಾರ್ಖಾನೆ ಆರೆಸ್ಸೆಸ್ಸ್ ಆಗಿದೆ ಎಂದು ಅವರು ಹೇಳಿದರು. ಪಿಎಫ್‍ಐ ಸಂಘಟನೆಯನ್ನು ಯಾರೂ ಸುಮ್ಮನೆ ಬ್ಯಾನ್ ಮಾಡಿಲ್ಲ. ಪಿಎಫ್‍ಐ ನಿಷೇಧದಿಂದ ಕಾಂಗ್ರೆಸ್‍ಗೆ ಒಳಗಿನಿಂದಲೇ ಸಂತೋಷವಾಗಿದೆ ಎಂದು ಯತ್ನಾಳ್ ವ್ಯಂಗ್ಯವಾಡಿದರು.

ಭಾರತ ಜೋಡೊ ಎನ್ನುವುದಕ್ಕೆ ಕಾಂಗ್ರೆಸ್‍ಗೆ ನೈತಿಕತೆಯೇ ಇಲ್ಲ. ಕಾಂಗ್ರೆಸ್ ಭಾರತವನ್ನು ತೋಡೋ ಮಾಡುವ ಕೆಲಸ ಮಾಡಿದೆ. ಆದರೆ ಪಿಎಂ ಮೋದಿ ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು,  ಕನಕಪುರವನ್ನು  ಪೂರ್ತಿ ಲೂಟಿ ಹೊಡೆದಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅಕ್ರಮ ಆಸ್ತಿ ಇದೆ. ನನ್ನ ಮನೆ ಮೇಲೆ ದಾಳಿ ಮಾಡ್ತಾರಾ? 10 ಬಾರಿ ದಾಳಿ ನಡೆಸಿದರೂ ನನ್ನ ಬಳಿ ಏನೂ ಸಿಗುವುದಿಲ್ಲ. ನೀವು ಕಳ್ಳತನ ಮಾಡಿದ್ದೀರಿ ಅದಕ್ಕೆ ಸಿಬಿಐನವರು ದಾಳಿ ಮಾಡುತ್ತಿದ್ದಾರೆ. ನಾವೇನು ಸಿದ್ದರಾಮಯ್ಯ ಮನೆ ಮೇಲೆ ದಾಳಿ ಮಾಡಿದ್ದೀವಾ? ಎಂದು ಪ್ರಶ್ನೆ ಮಾಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News