ಭಾರತ್ ಜೋಡೊ ಯಾತ್ರೆ; ಸೋನಿಯಾ ಗಾಂಧಿಯ ಶೂಲೇಸ್‌ಗಳನ್ನು ಕಟ್ಟುತ್ತಿರುವ ರಾಹುಲ್ ಗಾಂಧಿ ಫೋಟೋ ವೈರಲ್

Update: 2022-10-06 08:54 GMT

ಮಂಡ್ಯ: 2 ದಿನ ವಿಶ್ರಾಂತಿ ಬಳಿಕ ಕರ್ನಾಟಕದಲ್ಲಿ 5ನೇ ದಿನದ ಭಾರತ್ ಜೋಡೊ ಯಾತ್ರೆ ಮತ್ತೆ ಇಂದಿನಿಂದ ಆರಂಭವಾಗಿದೆ. 

ಇಂದು (ಅಕ್ಟೋಬರ್ 6) ಭಾರತ್ ಜೋಡೊ ಯಾತ್ರೆ ಮಂಡ್ಯ ಜಿಲ್ಲೆಯ ಬೆಳ್ಳಾಳೆಯಿಂದ ಪುನರಾರಂಭಗೊಂಡಾಗ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿರುವ ಕ್ಷಣಗಳನ್ನು ಕೆಲವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. 

ಇದೇ ವೇಳೆ  ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಅವರ ಶೂಲೇಸ್‌ಗಳನ್ನು ಕಟ್ಟುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ರಾಹುಲ್ ಗಾಂಧಿ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಅವರ ಶೂಲೇಸ್‌ಗಳನ್ನು ಕಟ್ಟುತ್ತಿರುವ ಫೋಟೋ ಹಂಚಿಕೊಂಡಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್,  "ತಾಯಿ ಉಸಿರಾಡಿದರೂ ಅದರಲ್ಲಿ ಆಶೀರ್ವಾದವಿದೆ" ಎಂದು ಬರೆದುಕೊಂಡಿದ್ದಾರೆ. 

'ತಾಯಿಯನ್ನು ಗೌರವಿಸುವವರು, ಕಾಳಜಿ ತೋರುವವರು ಮಾತ್ರ ತಾಯ್ನೆಲವನ್ನೂ ಗೌರವಿಸಬಲ್ಲರು..'' ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. 

ಇನ್ನು ಶಾಂತಿ ನಗರ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್. ಎ ಹ್ಯಾರಿಸ್ ,  ''ಅಮ್ಮ ನನ್ನ ಈ ಜನ್ಮ ನಿನ್ನ ವರದಾನವಮ್ಮ! ಭಾರತ ಐಕ್ಯತಾ ಯಾತ್ರೆಗೆ ಹೊಸ ಮಿಂಚು ತಂದ ಕಾಂಗ್ರೆಸ್ ಅಧಿ ನಾಯಕಿ ಸೋನಿಯಾ ಗಾಂಧಿ'' ಎಂದು ಟ್ವೀಟ್ ಮಾಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News