ಕುಂಜತ್ತಬೈಲ್ ಅಲ್- ರಿಫಾಯಿಯ್ಯ ನೂರುಲ್ ಇಸ್ಲಾಮ್ ಮದ್ರಸದ ನೂತನ ಕೊಠಡಿ ಉದ್ಘಾಟನೆ ಸಮಾರಂಭ

Update: 2022-10-06 08:59 GMT

 ಸುರತ್ಕಲ್, ಅ.6:  ಜಮಾತುಲ್ ಮುಸ್ಲಿಮೀನ್ ಕಮಿಟಿ (ರಿ) ಸಿದ್ದೀಖ್ ಜುಮಾ ಮಸ್ಜಿದ್ ಮರಕಡ, ಕುಂಜತ್ತಬೈಲ್ ಇದರ ಅಧೀನದ ಅಲ್- ರಿಫಾಯಿಯ್ಯ ನೂರುಲ್ ಇಸ್ಲಾಮ್ ಮದ್ರಸದ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ಹಾಗೂ ಮೀಲಾದ್ ಸ೦ಭ್ರಮ-2022 ಕಾರ್ಯಕ್ರಮವು ಸಿದ್ದೀಖ್ ಜುಮಾ ಮಸ್ಲಿದ್ ವಠಾರದಲ್ಲಿ ಜಮಾಅತ್ ಅಧ್ಯಕ್ಷ ಅಶ್ರಫ್ ಮರಕಡ ಅಧ್ಯಕ್ಷತೆಯಲ್ಲಿ ಜರುಗಿತು. 

ನೂತನ ಕೊಠಡಿಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಮದ್ರಸಗಳ ಬಗ್ಗೆ ಸಮಾಜದಲ್ಲಿ ಕೆಲವೊಂದು ತಪ್ಪು ಸಂದೇಶಗಳು ಹರಿದಾಡುತ್ತಿವೆ. ಮದ್ರಸಗಳು ತೆರೆದ ಪುಸ್ತಕವಿದ್ದಂತೆ, ಈ ಬಗ್ಗೆ ಯಾರೂ ಕೂಡಾ ಗೊಂದಲಕ್ಕೊಳಗಾಗದೆ ಮದ್ರಸಗಳ ಬಗ್ಗೆ ಅಲ್ಲಿನ ಪಠ್ಯಕ್ರಮಗಳ ಬಗ್ಗೆ ಹಾಗೂ ಬೋಧನೆಗಳ ಬಗ್ಗೆ ಖುದ್ದಾಗಿ ಭೇಟಿ ನೀಡಿ ಮುಕ್ತವಾಗಿ ಅಧ್ಯಯನ ಮಾಡಬಹುದು. ಎಲ್ಲಾ ಧರ್ಮಗಳಂತೆ ಇಸ್ಲಾಂ ಧರ್ಮವೂ ಕೂಡಾ ಶಾಂತಿ, ಸಹನೆ, ಮಾನವೀಯತೆ ಸಂದೇಶಗಳನ್ನು ನೀಡುತ್ತಿದೆ. ಪ್ರವಾದಿ ಪೈಗಂಬರರ ಸಾಮರಸ್ಯದ ಸಂದೇಶಗಳನ್ನು ಅನುಸರಿಸುವ ಮೂಲಕ ಸೌಹಾರ್ದದ ನಾಡನ್ನು ಕಟ್ಟಲು ನಾವೆಲ್ಲ ಮುಂದಾಗಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಮಾಜಿ ಮೇಯರ್ ಎಂ.ಹರಿನಾಥ್, ಮಾಜಿ ಉಪಮೇಯರ್ ಕೆ.ಮುಹಮ್ಮದ್, ಸ್ಥಳೀಯ ಕಾರ್ಪೊರೇಟರ್ ಶರತ್ ಕುಮಾರ್, ಗಲ್ಫ್ ನೌಕರರ ಸಂಘದ ಅಧ್ಯಕ್ಷ ನಝೀರ್ ಹುಸೈನ್, ಜಮಾಅತ್ ಪದಾಧಿಕಾರಿಗಳಾದ ಇಬ್ರಾಹೀಂ ಅಬ್ಬಾಸ್, ಇಬ್ರಾಹೀಂ ಅತ್ರಬೈಲ್, ಕೆ.ಎಸ್.ಮುಹಮ್ಮದ್, ನೂರ್ ಮುಹಮ್ಮದ್ ಇನ್ನಿತರರು ಉಪಸ್ಥಿತರಿದ್ದರು

ಖತೀಬ್ ಅನ್ಸಾರ್ ಸಖಾಫಿ ಮುಕ್ವೆ ದುಆಗೈದರು. ಕಾರ್ಯದರ್ಶಿ ಹುಸೈನ್ ರಿಯಾಝ್ ಸ್ವಾಗತಿಸಿದರು, ರಹ್ಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News