ನನ್ನ ಮನವಿಯನ್ನು ತಿರಸ್ಕರಿಸಿ, ನಾಳೆ ವಿಚಾರಣೆಗೆ ಬರಲೇಬೇಕೆಂದು ಹೇಳಿದ್ದಾರೆ: ಡಿ.ಕೆ. ಶಿವಕುಮಾರ್

Update: 2022-10-06 09:35 GMT

ಮಂಡ್ಯ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ನಾಳೆ (ಅ.7) ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಮತ್ತು ಸಂಸದ ಡಿ.ಕೆ ಸುರೇಶ್‍ಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.

ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯಸಿರುವ ಡಿ.ಕೆ. ಶಿವಕುಮಾರ್,  ''ನಾನು ‘ಜೋಡೋ’ ಪಾದಯಾತ್ರೆಯಲ್ಲಿ ಇದ್ದೇನೆ. ನಾಳೆಯ ವಿಚಾರಣೆಯನ್ನು ಮುಂದೂಡುವಂತೆ ಕೇಳಿಕೊಂಡಿದ್ದೆ. ನಾಳೆ ಬರಲೇಬೇಕೆಂದು ಈ.ಡಿ ನನಗೆ ಮತ್ತು ಸುರೇಶ್ ಗೆ ಸಮನ್ಸ್ ನೀಡಿದೆ. ಈ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚೆ ಮಾಡಿ, ಬಳಿಕ ವಿಚಾರಣೆಗೆ ಹಾಜರಾಗುವ ಬಗ್ಗೆ ತೀರ್ಮಾನ ಮಾಡುತ್ತೇನೆ'' ಹೇಳಿದ್ದಾರೆ. 

ಇನ್ನು ಈ ಕುರಿತು ಟ್ವೀಟ್ ಮಾಡಿರುವ ಅವರು, ''#BharatJodoYatra ದೃಷ್ಟಿಯಿಂದ ಸಮನ್ಸ್ ಅನ್ನು ಮುಂದೂಡುವಂತೆ ನಾನು ಜಾರಿ ನಿರ್ದೇಶನಾಲಯವನ್ನು ವಿನಂತಿಸಿದ್ದೆ. ಅದನ್ನು ಅವರು ತಿರಸ್ಕರಿಸಿರುವುದು ರಾಜಕೀಯ ಕಿರುಕುಳದ ಸ್ಪಷ್ಟ ಸಂಕೇತವಾಗಿದೆ. #BharathAikyataYatre ಯಲ್ಲಿ ನಾನು ಭಾಗವಹಿಸುವುದು ಅವರಿಗೆ ಇಷ್ಟವಿಲ್ಲ'' ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News