ಮದರಸಗಳ ಸಮೀಕ್ಷೆಗೆ ಮುಂದಾದ ಸರಕಾರದ ವಿರುದ್ಧ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಕಿಡಿ

Update: 2022-10-06 18:42 GMT

ಬೆಂಗಳೂರು, ಅ.6: ಮದರಸಗಳಲ್ಲಿ ಕಳಪೆ ಗುಣಮಟ್ಟದ ಶಿಕ್ಷಣವಿದೆ ಎಂದು ರಾಜ್ಯ ಸರಕಾರ ಪದೇ ಪದೇ ಹೇಳುತ್ತಿದೆ. ಆದರೆ, ಸರಕಾರವು ಈ ಸಮಸ್ಯೆಯನ್ನು ಬಗೆ ಹರಿಸಲು ಸರಕಾರೇತರ ಸಮಿತಿ ಮಾಡುವ ಬದಲು ಮದ್ರಸಾಗಳ ಸಮೀಕ್ಷೆ ನಡೆಸಲು ಮುಂದಾಗಿದೆ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಕಿಡಿಕಾರಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಲ್ಲಿ ಶೇ.1.38ರಷ್ಟು ಮುಸಲ್ಮಾನರು ಶಾಲೆಗೆ ಹೋಗುವುದಿಲ್ಲ. ಅವರು ಶುಲ್ಕವಿಲ್ಲದ ಮದರಸಗಳಲ್ಲಿ ಕಲಿಯಲು ಹೋಗುತ್ತಾರೆ. ಆದರೆ, ಈಗ ರಾಜ್ಯ ಸರಕಾರ ಏಕಾಏಕಿ ಮದರಸಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಕಿಡಿಕಾರಿದರು. 

ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರು 2005ರಲ್ಲಿ ಅಲ್ಪಸಂಖ್ಯಾತರ ಅಧ್ಯಯನ ಸಮಿತಿ ರಚಿಸಿದಾಗ ಈ ಸಮಿತಿ ವರದಿಯನ್ನು ಸರಕಾರ ಅಂಗೀಕರಿಸಬಾರದು ಎಂದು ಆಗ ಗುಜರಾತಿನ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಹೇಳಿದ್ದರು. ಈಗ 2018ರಲ್ಲಿ ಮೋದಿ ಅವರು ಎಲ್ಲ ಮುಸಲ್ಮಾನ ಯುವಕರು ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ ಹಿಡಿದಿರುವಂತೆ ಮಾಡಲು ಸಿದ್ಧ ಎಂದು ಹೇಳುತ್ತಾರೆ. ಆದರೆ ಇದುವರೆಗೂ ಆ ಬಗ್ಗೆ ಕೆಲಸ ಮಾಡಿಲ್ಲ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News