ಕಾಲೇಜುಗಳಲ್ಲಿ ಹಳ್ಳಿಹೈದ, ಅಪ್ಪು ಅಮರ, ಅಲ್ಲಮ ಪ್ರಭುದೇವರು ಕೃತಿಗಳನ್ನು ಖರೀದಿಸಲು ಅನುಮತಿ ನೀಡಿದ ಸರಕಾರ

Update: 2022-10-06 18:41 GMT

ಬೆಂಗಳೂರು, ಅ. 6: ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಸಾಹಿತಿ ಡಾ.ದೊಡ್ಡರಂಗೇಗೌಡರ ಜೀವನ ಚರಿತ್ರೆಯಾದ ‘ಹಳ್ಳಿಹೈದ’, ಅಪ್ಪು ಅಮರ, ಹಾಗೂ ಅಲ್ಲಮ ಪ್ರಭುದೇವರು ಕೃತಿಗಳನ್ನು ಖರೀದಿಸಲು ರಾಜ್ಯ ಸರಕಾರ ಅನುಮತಿಯನ್ನು ನೀಡಿದೆ. ಈ ಕುರಿತು ಜು.27ರಂದು ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ಪುಸ್ತಕಗಳ ಪ್ರಕಾಶಕರು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದರು.

ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬಿತ್ತುವುದರಲ್ಲಿ, ಪರಿಸರ ಪ್ರಜ್ಞೆ ಮೂಡಿಸುವುದರಲ್ಲಿ, ಬಹುಶಿಸ್ತೀಯ ಆಕರಗಳನ್ನು ಅಧ್ಯಯನ ಮಾಡಿ, ಬಹುಮುಖೀ ಆದ ನೆಲೆಯಲ್ಲಿ ಅಧ್ಯಯನಕ್ಕೆ ಪೂರಕವಾಗಿ ರಾಜ್ಯದ ಎಲ್ಲ ಕಾಲೇಜುಗಳ ಗ್ರಂಥಾಲಯದಲ್ಲಿಡಲು ಸುತ್ತೋಲೆಯನ್ನು ಹೊರಡಿಸಲಾಗಿದೆ. 

ಹಾಗೆಯೇ ವಿದ್ಯಾರ್ಥಿಗಳಲ್ಲಿ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಭಾವನೆಯನ್ನು ಹಾಗೂ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಪ್ರದೀಪ್ ಕುಮಾರ್ ಜೆ.ಪಿ. ಅವರ ‘ಸಮಗ್ರ ಕರ್ನಾಟಕ ಇತಿಹಾಸ’ ಹಾಗೂ ಆಂಜನೇಯ ಕೆ. ಎಚ್. ಅವರ ‘ಸುರಭಿ ಕನ್ನಡ ವ್ಯಾಕರಣ ಹಾಗೂ ಸಾಮನ್ಯ ಕನ್ನಡ’ ಪುಸ್ತಕವನ್ನು ಖರೀದಿಸಲು ಕಾಲೇಜು ಶಿಕ್ಷಣ ಇಲಾಖೆಯು ಅನುಮತಿಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News