×
Ad

ದಾವಣಗೆರೆ: ಡಾ.ಎಲ್.ರಾಕೇಶ್ CSPF ಚುನಾವಣಾ ಅಭ್ಯರ್ಥಿಯಾಗಿ ಆಯ್ಕೆ

Update: 2022-10-07 11:43 IST
ಡಾ.ಎಲ್.ರಾಕೇಶ್

ದಾವಣಗೆರೆ: ಅಮೆರಿಕಾದ ವಾಷಿಂಗ್‌ಟನ್‌ನಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಂಕ್ ಸಿವಿಲ್ ಸೊಸೈಟಿ ಪಾಲಿಸಿ ಫಾರ್ಮ್ (CSPF) 2022-24 ಅಧಿಕಾರ ಅವಧಿ ವರ್ಕಿಂಗ್ ಗ್ರೂಪ್ ವಿಶೇಷ ಪ್ರತಿನಿಧಿ ಚುನಾವಣಾ ಅಭ್ಯರ್ಥಿಯಾಗಿ ದಾವಣಗೆರೆಯ ಡಾ.ಎಲ್.ರಾಕೇಶ್ ಅವರು ದಕ್ಷಿಣ ಏಷ್ಯಾದಿಂದ ಆಯ್ಕೆಯಾಗಿದ್ದಾರೆ.

ಜಗತ್ತಿನ 189 ದೇಶಗಳ ಪ್ರತಿನಿಧಿಗಳು ಡಾ.ಎಲ್.ರಾಕೇಶ್ ಅವರನ್ನು ಆಯ್ಕೆ ಮಾಡಲು ಮತದಾನ ಮಾಡಲಿ ದ್ದಾರೆ. ಅ.31ರ ವರೆಗೆ ಒಂದು ತಿಂಗಳ ಕಾಲ ಅಮೆರಿಕಾದ ವಾಷಿಂಗ್‌ಟನ್‌ನಲ್ಲಿ ಚುನಾವಣೆ ನಡೆಯಲಿದೆ.

ದಾವಣಗೆರೆಯ ಐಡಾ ಲವ್‌ಲೇಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ.ಎಲ್.ರಾಕೇಶ್ ಕಳೆದ ಅಕ್ಟೋಬರ್‌ನಲ್ಲಿ ನಡೆದ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಅಂತರಾಷ್ಟ್ರೀಯ ಹಣಕಾಸು ನಿಧಿ, ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದರು. ಅ. 11 ರಿಂದ 14ರ ವರೆಗೆ ನಡೆಯಲಿರುವ ಈ ಬಾರಿಯ ಸಭೆಗೂ ಅವರನ್ನು ವಾಷಿಂಗ್‌ಟನ್‌ಗೆ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.

ತಂತ್ರಜ್ಞಾನ ಮತ್ತು ಆವಿಸ್ಕಾರ, ಸುಸ್ಥಿರ ಅಭಿವೃದ್ಧಿ ಗುರಿಗಳು, ತರಬೇತಿ ಮತ್ತು ವೃತ್ತಿಪರ ಅಭಿವೃದ್ಧಿ, ಉದಯೋನ್ಮುಖ ಮಾರುಕಟ್ಟೆಗಳು, ಬಂಡವಾಳ ಮಾರುಕಟ್ಟೆಗಳು, ನಾಗರಿಕ ಸಮಾಜ ಪ್ರಾತಿನಿಧ್ಯ ವೇದಿಕೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ನಡೆದ ಸಭೆಯಲ್ಲಿ ಡಾ.ಎಲ್.ರಾಕೇಶ್ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News