ಮಹಮೂದ್ ಗವಾನ್ ಮದರಸಾ ಬಳಿ ದಾಂಧಲೆ ಪ್ರಕರಣ: ಅನಧಿಕೃತವಾಗಿ ನುಗ್ಗಿಲ್ಲ, ದಾಳಿ ನಡೆದಿಲ್ಲ ಎಂದ ಸಚಿವ ಆರಗ ಜ್ಞಾನೇಂದ್ರ

Update: 2022-10-07 18:01 GMT

ಬೆಂಗಳೂರು: ದಸರಾ ಮೆರವಣಿಗೆ ಸಂದರ್ಭದಲ್ಲಿ  ಬೀದರ್ ನ ಐತಿಹಾಸಿಕ ಮಹಮೂದ್ ಗವಾನ್ ಮದರಸಾ ಆವರಣಕ್ಕೆ ಗುಂಪೊಂದು ಅಕ್ರಮವಾಗಿ ಪ್ರವೇಶಿಸಿ, 'ಜೈ ಶ್ರೀ ರಾಮ್' ಘೋಷಣೆ ಕೂಗಿದ್ದಲ್ಲದೆ, ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿ 60 ಮಂದಿ ವಿರುದ್ಧ ಬೀದರ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. 

ಈ ಸಂಬಂಧ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ''ಬೀದರ್ ನಲ್ಲಿ ಅದೊಂದು ಸ್ಮಾರಕ, ಮಸೀದಿ ಇದೆ. ಅಲ್ಲಿ ಶಮಿ ವೃಕ್ಷ ಇತ್ತು, ಬಹಳ ವರ್ಷದಿಂದ ಪೂಜೆ ಮಾಡ್ತಾ ಇದ್ದರು. ದಸರಾ ಮೆರವಣಿಗೆಗೆ ಹೋಗುವಾಗ ಐದಾರು ಜನ ಮಾತ್ರ ಈ ಹಿಂದೆ ಹೋಗ್ತಾ ಇದ್ದರು. ಆದರೆ, ಈ ವರ್ಷ 25ಕ್ಕೂ ಹೆಚ್ಚು ಜನರು ಹೋಗಿದ್ದಾರೆ. ಅದನ್ನೇ ವಿಡಿಯೋ ಮಾಡಿ ಹೊರಗೆ ಬಿಟ್ಟಿದ್ದಾರೆ ಅಷ್ಟೇ. ಅನಧಿಕೃತವಾಗಿ ನುಗ್ಗಿಲ್ಲ, ದಾಳಿ ಏನೂ ನಡೆದಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡಲು ಎಫ್​ಐಆರ್​ ಹಾಕಿದ್ದಾರೆ'' ಎಂದು ಹೇಳಿದ್ದಾರೆ. 

ಎಫ್ ಐಆರ್ ದಾಖಲು:  ಆರೋಪಿಗಳಾದ ನರೇಶ್ ಗೌಳಿ, ಪ್ರಕಾಶ್ ಮೆಕಾನಿಕ್, ಸಂಜು ಟೈಲರ್, ಅರುಣ್ ಗೌಳಿ, ಮುನ್ನ, ಸಾಗರ್, ಜಗದೀಶ್, ಗಣೇಶ್ ಗೌಳಿ ಹಾಗೂ ಗೊರಕ ಗೌಳಿ ಸೇರಿ 60 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೀದರ್ | ಮಹಮೂದ್ ಗವಾನ್ ಮದರಸಾ ಆವರಣಕ್ಕೆ ಅಕ್ರಮ ಪ್ರವೇಶ, 'ಜೈ ಶ್ರೀ ರಾಮ್' ಘೋಷಣೆ: 9 ಮಂದಿ ವಿರುದ್ಧ FIR  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News