ಸರಕಾರಿ ನೌಕರರಿಗೆ ಶೇ.3.75ರಷ್ಟು ತುಟ್ಟಿಭತ್ಯೆ ಹೆಚ್ಚಳ

Update: 2022-10-07 13:33 GMT

ಬೆಂಗಳೂರು, ಅ. 7: ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇಕಡ 3.75ರಷ್ಟು ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಆರ್ಥಿಕ ಇಲಾಖೆ ಸರಕಾರದ ಉಪ ಕಾರ್ಯದರ್ಶಿ ಕೆ.ಉಮಾ ಅವರು ಆದೇಶ ಹೊರಡಿಸಿದ್ದು, ‘ರಾಜ್ಯ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರ ತುಟ್ಟಿಭತ್ಯೆಯನ್ನು 2022ರ ಜುಲೈ 1ರಿಂದ ಪೂರ್ವನ್ವಯವಾಗುವಂತೆ ಶೇ.3.75 ರಷ್ಟು ಹೆಚ್ಚಿಸಲಾಗಿದೆ. 2018ರ ಪರಿಷ್ಕøತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ನೌಕರರಿಗೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ.27.25ರಿಂದ ಶೇ.31ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲು ಸರಕಾರ ಹರ್ಷಿಸುತ್ತದೆ' ಎಂದು ಹೇಳಲಾಗಿದೆ.

ಸರಕಾರಿ ನೌಕರರು, ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೂ ಈ ಆದೇಶ ಅನ್ವಯವಾಗಲಿದೆ. ಸರಕಾರದ ಮತ್ತು ಎಲ್ಲ ಜಿಲ್ಲಾ ಪಂಚಾಯತ್ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‍ಚಾರ್ಜ್ ನೌಕರರಿಗೆ ಹಾಗೂ ಸರಕಾರಿ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿವಿಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯಿಸುತ್ತದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ರಾಜ್ಯ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರ ತುಟ್ಟಿಭತ್ಯೆಯನ್ನು 2022ರ ಜುಲೈ 1ರಿಂದ ಅನ್ವಯವಾಗುವಂತೆ ಶೇ.3.75ರÀಷ್ಟು ಹೆಚ್ಚಿಸಿಲು ಅನುಮೋದಿಸಿದ್ದು, ಇದಕ್ಕಾಗಿ ಸರಕಾರ ಹೆಚ್ಚುವರಿಯಾಗಿ 1,282.72ಕೋಟಿ ರೂ.ಭರಿಸಲಿದೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News