ಭಾರತ್ ಜೋಡೊ ಯಾತ್ರೆಯಲ್ಲಿ ‘ಸಾವರ್ಕರ್ ಫ್ಲೆಕ್ಸ್' ಬಿಜೆಪಿಯ ‘ಡರ್ಟಿ ಟ್ರಿಕ್ಸ್': ಜೈರಾಮ್ ರಮೇಶ್

Update: 2022-10-07 15:17 GMT

ಬೆಂಗಳೂರು, ಅ. 7: ಬಿಜೆಪಿಯ ‘ಡರ್ಟಿ ಟ್ರಿಕ್ಸ್ ಡಿಪಾರ್ಟ್‍ಮೆಂಟ್' ಕಾಂಗ್ರೆಸ್ ಶಾಸಕರ ಹೆಸರಲ್ಲಿ ಫೇಕ್(ನಕಲಿ) ಪೋಸ್ಟರ್ ತಯಾರಿಸಿತ್ತು. ಈ ಕುರಿತು ಕಾಂಗ್ರೆಸ್ ಪಕ್ಷವು ತಕ್ಷಣವೇ ಪೊಲೀಸ್ ದೂರನ್ನೂ ದಾಖಲಿಸಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮಂಡ್ಯದಲ್ಲಿ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ ‘ಭಾರತ್ ಜೋಡೋ ಯಾತ್ರೆ'ಯಲ್ಲಿ ಸಾವರ್ಕರ್ ಪೋಟೋ ಜೊತೆಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಎನ್.ಎ.ಹಾರೀಸ್ ಪೋಟೋ ಹಾಕಿ ಸ್ವಾಗತ ಕೋರಲಾಗಿತ್ತು. ಅದೀಗ ವಿವಾದಕ್ಕೀಡಾಗಿದೆ.

‘ಆದರೆ, ಈ ಮಾಹಿತಿಯನ್ನು ನಿಮಗೆ ತಿಳಿಸಲು ಡಿಜಿಟಲ್ ಇಂಡಿಯಾದ ದ್ಯೋತಕದಂತಿರಬೇಕಿದ್ದ ಕರ್ನಾಟಕ ರಾಜ್ಯದಲ್ಲಿನ ನೆಟ್‍ವರ್ಕ್ ಸಮಸ್ಯೆಯಿಂದ ತಡವಾಗಿದೆ!' ಎಂದು ಜೈರಾಮ್ ರಮೇಶ್ ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಸಾವರ್ಕರ್ ಪೋಟೋ ಜೊತೆಗೆ ನಮ್ಮ ಪಕ್ಷದ ಮುಖಂಡರ ಪೋಟೋ ಹಾಕಿರುವ  ಫ್ಲೆಕ್ಸ್ ಗಳನ್ನು ಕೂಡಲೇ ತೆರವುಗೊಳಿಸಿ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿಡಿ ಗಂಗಾಧರ್ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News