ಹೊಸ ರೈಲಿಗೆ ಒಡೆಯರ್​ ಹೆಸರು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು: ಸಿದ್ದರಾಮಯ್ಯ

Update: 2022-10-07 17:12 GMT

ಮಂಡ್ಯ:  ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಟಿಪ್ಪು ಎಕ್ಸ್ ಪ್ರೆಸ್ (ರೈಲು ಗಾಡಿ ಸಂಖ್ಯೆ 12613/12614) ಹೆಸರನ್ನು ‘ಒಡೆಯರ್ ಎಕ್ಸ್ ಪ್ರೆಸ್’ ಎಂದು ಬದಲಾಯಿಸಿ ಕೇಂದ್ರ ರೈಲ್ವೆ ಮಂಡಳಿ ಶುಕ್ರವಾರ ಆದೇಶ ಹೊರಡಿಸಿದ್ದು, ಈ ಕುರಿತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಿಜೆಪಿಯವರಿಗೆ ದ್ವೇಷ ಬಿತ್ತುವುದೇ ಕೆಲಸ.  ಟಿಪ್ಪು ಎಕ್ಸ್​ಪ್ರೆಸ್​ ರೈಲಿನ ಹೆಸರು ಬದಲಾಯಿಸುವ ಅಗತ್ಯವಿರಲಿಲ್ಲ. ಇದರ ಬದಲಾಗಿ ಹೊಸ ರೈಲಿಗೆ ಒಡೆಯರ್​ ಹೆಸರು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು'' ಎಂದು ಹೇಳಿದರು. 

''ಒಡೆಯರ್ ಅವರಿಗೆ ಗೌರವ ಕೊಡಬೇಕೆಂದರೆ ಇನ್ನೊಂದು ಹೊಸ ರೈಲಿಗೆ ಹಸರಿಡಲಿ. ಇದು ದ್ವೇಷ ಬಿತ್ತುವ ಉದ್ದೇಶದಿಂದಲೇ ಬಿಜೆಪಿಯವರು ಈ ಥರ ಎಲ್ಲ ಮಾಡುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದನ್ನೂ ಓದಿ>>> ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ‘ಟಿಪ್ಪು ಎಕ್ಸ್ ಪ್ರೆಸ್’ ಹೆಸರು ಬದಲಿಸಿದ ರೈಲ್ವೆ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News