ಸಿದ್ದರಾಮಯ್ಯ ಓಡಿಸುವ ರೈಲಿಗೆ ಜಿನ್ನಾ ಹೆಸರಿಡಲಿ: ಸಚಿವ ಅಶೋಕ್
Update: 2022-10-08 17:12 IST
ಬೆಂಗಳೂರು, ಅ. 8: ‘ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ ಪ್ರೆಸ್ ಎಂದು ಬದಲಾವಣೆ ಮಾಡಿದ್ದು, ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಜನತೆಗೆ ನೀರು ಕೊಡಲು ಕೆಆರ್ ಎಸ್ ಅಣೆಕಟ್ಟು ನಿರ್ಮಿಸಿದ ಆಧುನಿಕ ಕರ್ಣ. ಹೀಗಾಗಿ ರೈಲಿಗೆ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ' ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಓಡಿಸುವ ರೈಲಿಗೆ ಮುಹಮ್ಮದ್ ಆಲಿ ಜಿನ್ನಾ ಅಥವಾ ಬಿಲ್ ಲಾಡೆನ್ ಹೆಸರಿಡಲಿ, ನಮ್ಮದೇನು ಅಭ್ಯಂತರ ವಿಲ್ಲ' ಎಂದು ಟಿಪ್ಪು ಎಕ್ಸ್‍ಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಿರುವುದನ್ನು ಸಮರ್ಥನೆ ಮಾಡಿದರು.