'ಭಾರತ್ ಜೋಡೋ' ಯಾತ್ರೆಯಿಂದ ಏನೂ ಆಗುವುದಿಲ್ಲ: ಬಿ.ಎಸ್. ಯಡಿಯೂರಪ್ಪ

Update: 2022-10-09 13:31 GMT
ಬಿ.ಎಸ್. ಯಡಿಯೂರಪ್ಪ (File Photo)

ಬೆಂಗಳೂರು: ‘ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಏನೂ ಆಗುವುದಿಲ್ಲ. ಪಾದಯಾತ್ರೆಗೆ ಹೆದರಿ ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ ಎಂಬುದು ಸುಳ್ಳು' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B. S. Yediyurappa) ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾನು ರಾಹುಲ್ ಗಾಂಧಿಗೆ ಪ್ರಶ್ನೆ ಮಾಡುತ್ತೇನೆ. ಉತ್ತರ ಪ್ರದೇಶದಲ್ಲಿ ನಿಮ್ಮ ಸಹೋದರಿ ಮಹಿಳೆಯರನ್ನು ಸೇರಿಸಿ ಪ್ರಚಾರ ಮಾಡಿದರಲ್ಲಾ ಏನಾಯ್ತು? ಹಾಗೇ ನಿಮ್ಮ ಐಕ್ಯತಾ ಯಾತ್ರೆಯಿಂದ ಏನೂ ಆಗುವುದಿಲ್ಲ. ಈಗಾಗಲೇ ಕಾಂಗ್ರೆಸ್ (Congress) ಪಕ್ಷ ಹೇಳ ಹೆಸರಿಲ್ಲದಂತೆ ಆಗಿದೆ' ಎಂದು ವಾಗ್ದಾಳಿ ನಡೆಸಿದರು.

‘ಕರ್ನಾಟಕ ರಾಜ್ಯದಲ್ಲೂ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆಬರುವುದಿಲ್ಲ. ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ, ಒಡೆಯರ್ ಎಕ್ಸ್ ಪ್ರೆಸ್ ಎಂದು ಮರುನಾಮಕರಣ ಮಾಡಿರುವುದಕ್ಕೆ ವಿಪಕ್ಷಗಳು ವಿರೋಧಿಸಿದ್ದವು. ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರನ್ನು ಒಲೈಸುವ ಚಟ ಇದೆ. ಹೀಗಾಗಿ ಈ ರೀತಿಯ ಮಾತುಗಳನ್ನು ಆಡುತ್ತಾರೆ. ಇಡೀ ದೇಶ ಹಾಗೂ ರಾಜ್ಯದ ಜನರು ಇದನ್ನು ಸ್ವಾಗತಿಸಿದ್ದಾರೆ' ಎಂದು ಅವರು ತಿಳಿಸಿದರು.

‘ಮುಂದಿನ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 140 ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಯಾರೇ ಎಷ್ಟೇ ಬೊಬ್ಬೆ ಹೊಡೆದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಇನ್ನು ಎರಡು ದಿನಗಳ ಬಳಿಕ 2 ತಂಡವಾಗಿ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ. ಸುಮಾರು 50 ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇವೆ ಎಂದು ಯಡಿಯೂರಪ್ಪ ಇದೇ ವೇಳೆ ಪ್ರಕಟಿಸಿದರು.

ಇದನ್ನೂ ಓದಿ: ಸಂಘಪರಿವಾರ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ; ಸಿಪಿಐ ಅಮಾನತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News