ಕೊಪ್ಪ: ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹುಬ್ಬುರ್ರಸೂಲ್ ಮೀಲಾದ್ ಕಾನ್ಫರೆನ್ಸ್

Update: 2022-10-10 04:29 GMT

ಕೊಪ್ಪ, ಅ.10: ಇಲ್ಲಿನ ಕೆಳಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಹುಬ್ಬುರ್ರಸೂಲ್ ಮೀಲಾದ್ ಕಾನ್ಫರೆನ್ಸ್ ನಡೆಯಿತು.

ಶುಕ್ರವಾರ ನಡೆದ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಸಿ.ಎಸ್.ಎಂ.ಹನೀಫ್ ಮದನಿ, ಮನುಷ್ಯ ಜೀವನದ ಪ್ರತೀ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರವಾದಿ ಮುಹಮ್ಮದ್ (ಸ.)ರ ಮಾದರಿ ಅಡಗಿದೆ ಎಂದು ಹೇಳಿದರು.

ಪ್ರವಾದಿ ಮುಹಮ್ಮದ್ (ಸ.)ರವರ ಜೀವನ, ಸಂದೇಶ, ಕರುಣೆ, ಪ್ರೀತಿ, ವ್ಯಾಪಾರ, ಕೃಷಿ, ನೆರೆಹೊರೆಯವರೊಂದಿಗಿನ ಸಂಬಂಧ, ತಂದೆತಾಯಿ, ಕುಟುಂಬ ಸಂಬಂಧ ಹೀಗೆ ಜೀವನದ ನಾನಾ ರಂಗಕ್ಕೆ ಸೇರಿದಂತೆ ಅವರ ಜೀವನ ಸಂದೇಶ ಈಗಿನ ಕಲುಷಿತ ವಾತಾವರಣದಲ್ಲಿ ಮತ್ತಷ್ಟು ಅಗತ್ಯತೆ ಸಮಾಜಕ್ಕೆ ಇದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಮುತ್ತಿನಕೊಪ್ಪದ ಕೌಕಬತುಲ್ ಹುದಾ ಎಜುಕೇಶನ್ ಸೆಂಟರ್ ನ ಮುದರ್ರಿಸ್ ಅಸ್ಸೈಯದ್ ಹುಸೈನುಲ್ ಜಮಾಲುಲೈಲಿ ತಂಙಳ್ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕೋತ್ಸವ ನಡೆಯಿತು.

 ಶನಿವಾರ ನೂರುಲ್ ಇಸ್ಲಾಂ ಶಾಫಿ ಮದ್ರಸದ ಮಕ್ಕಳಿಂದ ಮೀಲಾದ್ ಸಂದೇಶದ ಕಾರ್ಯಕ್ರಮಗಳು ನಡೆಯಿತು. ಇದೇ ಸಂದರ್ಭ ಜಮಾಅತ್ ಹಿರಿಯ ಸದಸ್ಯರುಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕೊಪ್ಪ ಜಮಾಅತ್ ವ್ಯಾಪ್ತಿಯಲ್ಲಿ ಮಯ್ಯತ್ ಪರಿಪಾಲನೆಯನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿಕೊಂಡು ಬರುತ್ತಿರುವ ಟಿ.ಕೆ.ಎಲ್.ಹಸನಬ್ಬ, ಎನ್.ಕೆ.ರಫೀಕ್, ಅಬ್ದುಲ್ ರಹಿಮಾನ್, ಮುಹಮ್ಮದ್ ಹುಸೇನ್, ಅಬ್ದುಲ್ ಖಾದರ್, ಸಂಶುದ್ದೀನ್ ಸಣ್ಣಕೆರೆ, ಉಮರ್ ಜೋಗಿಸರ, ಇಸ್ಮಾಯೀಲ್, ಅಬ್ದುಲ್ ಮಜೀದ್, ಹುಸೇನಬ್ಬರನ್ನು ಜಮಾಅತ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಮಂಗಳೂರು, ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಇಸ್ಲಾಂ ವಿದ್ವಾಂಸರಾಗಿ ಪದವಿ ಪಡೆದ ಜಮಾಅತ್ ಮದ್ರಸದ  ಹಳೆ ವಿದ್ಯಾರ್ಥಿ ಮಾಲಿಕ್ ಮಿಸ್ಬಾಹಿಯವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ರವಿವಾರ ಸಾಮೂಹಿಕ ಮೌಲಿದ್, ದ್ಸಿಕ್ರ್ ಸ್ವಲಾತ್ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಜಮಾಅತ್ ಅದ್ಯಕ್ಷ ಕೆ.ಎಂ.ಝೈನುದ್ದೀನ್, ಮಾಜಿ ಅಧ್ಯಕ್ಷರುಗಳಾದ ಹಾಜಿ ಅಹ್ಮದ್ ಕೊರಡಿಹಿತ್ಲು, ಹಾಜಿ ಉಮರಬ್ಬ, ಎಚ್.ಎಸ್.ಅಬ್ದುಲ್ ಖಾದರ್, ಎಚ್.ಎಸ್.ಮಯ್ಯದ್ದಿ, ಮದ್ರಸ ಮುಖ್ಯೋಪಾಧ್ಯಾಯ ರಫೀಕ್ ಮದನಿ, ಸಂಸ್ಥೆಯ ಉಪಾದ್ಯಕ್ಷ ಶೇಕ್  ಮುಹಿಯುದ್ದೀನ್ ಬಾವ, ಪ್ರಧಾನ ಕಾರ್ಯದರ್ಶಿ ಝಬೈರ್ ಅಹ್ಮದ್, ಸಹ ಕಾರ್ಯದರ್ಶಿ ಸಂಶುದ್ದೀನ್, ಮದ್ರಸ ಅದ್ಯಾಪಕರಾದ ಶುಐಬ್ ಝಹ್ರಿ ಸುಲ್ತಾನಿ, ಯೂತ್ ಕಮಿಟಿ ಅಧ್ಯಕ್ಷ ಸಫಾನ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News