×
Ad

ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಡಿಕೆಶಿ ಓಟ!

Update: 2022-10-10 13:04 IST

ತುಮಕೂರು, ಅ.10: ನಾಲ್ಕು ದಿನಗಳ ಹಿಂದೆ 'ಭಾರತ್ ಜೋಡೋ ಯಾತ್ರೆ'(Bharat jodo yatra) ಮಂಡ್ಯದಲ್ಲಿ ಸಾಗುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಕೈಕೈ ಹಿಡಿದು ಓಡಿ ಸುದ್ದಿಯಾಗಿದ್ದರೆ, ಇಂದು ಓಟದ ಸರದಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(D.K.Shiva kumar) ಅವರದ್ದಾಗಿತ್ತು!

ಕರ್ನಾಟಕದಲ್ಲಿ 'ಭಾರತ್ ಜೋಡೋ ಯಾತ್ರೆ' ಸೋಮವಾರ 9ನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಗ್ಗೆ ಪಾದಯಾತ್ರೆ ತುಮಕೂರಿನಲ್ಲಿ ಸಾಗುತ್ತಿದ್ದ ವೇಳೆ ರಾಹುಲ್ ಗಾಂಧಿ ಜೊತೆ ಡಿಕೆಶಿ ಕಾಂಗ್ರೆಸ್ ಬಾವುಟ ಹಿಡಿದು ಸುಮಾರು 100 ಮೀಟರ್ ನಷ್ಟು ಓಡಿದರು. ಇದು ಯಾತ್ರೆಯಲ್ಲಿದ್ದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಲು ಕಾರಣವಾಯಿತು.
ಕಳೆದ ಗುರುವಾರ ಮಂಡಯದಲ್ಲಿ ಸಿದ್ದರಾಮಯ್ಯರ ಕೈಹಿಡಿದು ಓಡುವ ಮೂಲಕ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಮೋಡಿ ಮಾಡಿದ್ದ ರಾಹುಲ್ ಗಾಂಧಿ, ಇಂದು ಬಸವನಗುಡಿ ಬಳಿ ಡಿ.ಕೆ.ಶಿವಕುಮಾರ್ ಕೈ ಹಿಡಿದು ಓಡಿ ಗಮನಸೆಳೆದರು.

ತುಮಕೂರಿನಲ್ಲಿ 3ನೇ ದಿನ

ಭಾರತ್ ಜೋಡೊ ಪಾದಯಾತ್ರೆ ತುಮಕೂರು ಜಿಲ್ಲೆಯಲ್ಲಿ ಮೂರನೇ ದಿನ ಯಶಸ್ವಿಯಾಗಿ ಮುಂದುವರಿದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಪೋಚಕಟ್ಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಗೆ ಯಾತ್ರೆ ಆರಂಭಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,‌ ಶಾಸಕ ಡಾ.ಜಿ.ಪರಮೇಶ್ವರ ಸೇರಿದಂತೆ ಇತರ ಮುಖಂಡರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ |  ದಿಲ್ಲಿ: ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ: ನಾಲ್ಕು ಪ್ರಶಸ್ತಿ ಬಾಚಿಕೊಂಡ ಮಂಸೋರೆ ನಿರ್ದೇಶನದ 'ಆ್ಯಕ್ಟ್ 1978' ಚಿತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News