ಮೀಸಲಾತಿ ಪರವಾಗಿದ್ದೇವೆಂದು ನಾಗಪುರದ ಸೂತ್ರಧಾರರು ಹೇಳಲಿ: ಬಿಜೆಪಿಗೆ ಬಿ.ಕೆ. ಹರಿಪ್ರಸಾದ್ ಸವಾಲು

Update: 2022-10-10 16:44 GMT

ಚಿತ್ರದುರ್ಗ, ಅ. 10: ‘ಅಲ್ಪಸಂಖ್ಯಾತರ ಮೀಸಲಾತಿ ಮೊಟಕಿಗೆ ಹುನ್ನಾರ ನಡೆಸುತ್ತಿರುವ ಕೇಂದ್ರ ಸರಕಾರ, ಹಂತ ಹಂತವಾಗಿ ಅಲ್ಪಸಂಖ್ಯಾತರನ್ನು ದೂರವಿಡುವ ಕೆಲಸ ಮಾಡುತ್ತಿದೆ. ಮೀಸಲಾತಿ ಪರವಾಗಿದ್ದೇವೆಂದು ‘ನಾಗಪುರ' ಬಿಜೆಪಿ ಸೂತ್ರಧಾರರು ಹೇಳಲಿ' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಇಂದಿಲ್ಲಿ ಆರೆಸೆಸ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಜಿಲ್ಲೆಯ ಹಿರಿಯೂರಿನಲ್ಲಿ ‘ಭಾರತ್ ಜೋಡೋ ಯಾತ್ರೆ' ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ ಬಿಜೆಪಿಯವರಿಗೆ ಸಮಾನತೆ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

'ಮೋದಿ ಆಡಳಿತದಿಂದ ಸಮಾನತೆ ಎಂಬ ಸಚಿವ ಡಾ.ಸುಧಾಕರ್ ಹೇಳಿಕೆಗೆ ಅರ್ಥಹೀನ. ಇವರಿಗೆ ಬದ್ಧತೆ ಇದ್ದರೆ ಪ್ರತಿ ಗ್ರಾಮದಲ್ಲಿ ಸಹಭೋಜನ ಆಯೋಜಿಸಲಿ' ಎಂದು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News