×
Ad

ಹಗರಣಗಳನ್ನು ತನಿಖೆ ಮಾಡಿಸಿ, ಸಿದ್ದರಾಮಯ್ಯರನ್ನು ಎಲ್ಲಿ ನಿಲ್ಲಿಸ್ಬೇಕೋ ಅಲ್ಲಿ ನಿಲ್ಲಿಸ್ತಿವಿ: ಬಿಎಸ್ ವೈ ವಾಗ್ದಾಳಿ

Update: 2022-10-11 16:04 IST

ರಾಯಚೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಹಗರಣಗಳನ್ನು ಬಯಲು ಮಾಡುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್​​ ಯಡಿಯೂರಪ್ಪ (B. S. Yediyurappa) ಹೇಳಿದ್ದಾರೆ. 

ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

''ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ತನಿಖೆ ಮಾಡಿಸಿ,  ಸಿದ್ದರಾಮಯ್ಯರನ್ನು ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿಗೆ ನಿಲ್ಲಿಸುತ್ತೇವೆ. ಸಿದ್ದರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೇ?'' ಎಂದು ಪ್ರಶ್ನೆ ಮಾಡಿದರು.  

''ಹಗರಣವನ್ನೇ ಮಾಡದ ಪ್ರಧಾನಿ ಮೋದಿ ಬಗ್ಗೆ ಮಾತನಾಡ್ತೀರಾ? ನಿಮಗೆ 25 ಲಕ್ಷ ರೂ. ಮೌಲ್ಯದ ​ ವಾಚ್​ ಕೊಟ್ಟಿದ್ಯಾರು ಗೊತ್ತಿಲ್ವಾ?'' ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದರು. 

ವಿಜಯ ಸಂಕಲ್ಪ ಆರಂಭ: ''2023ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಸಂಕಲ್ಪ ಮಾಡಿದ್ದೇವೆ. ರಾಯಚೂರು ಜಿಲ್ಲೆಯಿಂದಲೇ ವಿಜಯ ಸಂಕಲ್ಪ ಶುರು ಮಾಡುತ್ತಿದ್ದೇವೆ ಎಂದ ಅವರು,  ನಾವು ರೈತರು, ಬಡವರು, ವಿದ್ಯಾರ್ಥಿಗಳಿಗಾಗಿ ಯೋಜನೆ ಜಾರಿಗೆ ಮಾಡಿದ್ದೇವೆ. ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದೆ. ರೈತರ ಮಕ್ಕಳಿಗೆ ಸ್ಕಾಲರ್​ಶಿಪ್​ ನೀಡುತ್ತಿದ್ದೇವೆ'' ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News