ಭಾರತದ ಆರ್ಥಿಕ ಪ್ರಗತಿ ಮುನ್ಸೂಚನೆ ಕಡಿತಗೊಳಿಸಿದ ಐಎಂಎಫ್

Update: 2022-10-11 17:42 GMT
INTERNATIONAL MONETARY FUND(IMF)

ವಿಶ್ವಸಂಸ್ಥೆ, ಅ.11: 2022-23ರಲ್ಲಿ ಭಾರತದ ಆರ್ಥಿಕ ಪ್ರಗತಿಯ ಮುನ್ಸೂಚನೆಯನ್ನು ವಿಶ್ವಸಂಸ್ಥೆ 6.8%ಕ್ಕೆ ಕಡಿತಗೊಳಿಸಿದೆ. ಜುಲೈಯಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು 7.4% ಎಂದು ಅಂದಾಜಿಸಲಾಗಿತ್ತು.

ರಶ್ಯ-ಉಕ್ರೇನ್ ಸಂಘರ್ಷ ಮತ್ತು ಹೆಚ್ಚುತ್ತಿರುವ ಹಣದುಬ್ಬರ ಈ ಪರಿಷ್ಕರಣೆಯ ಹಿಂದಿರುವ ಕಾರಣಗಳು ಎಂದು ತನ್ನ ಜಾಗತಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ಐಎಂಎಫ್ ಹೇಳಿದೆ. ವಿಶ್ವದ 3 ಬೃಹತ್ ಅರ್ಥವ್ಯವಸ್ಥೆಗಳಾದ ಅಮೆರಿಕ, ಚೀನಾ ಮತ್ತು ಯುರೋಪಿಯನ್ ಯೂನಿಯನ್‌ಗಳ ಅರ್ಥವ್ಯವಸ್ಥೆಯ ಸ್ಥಗಿತತೆ ಮುಂದುವರಿಯಲಿದೆ ಮತ್ತು ಈ ವರ್ಷ ಜಾಗತಿಕ ಹಣದುಬ್ಬರ 9.5%ಕ್ಕೆ ಏರಲಿದೆ ಮತ್ತು 2024ರಲ್ಲಿ 4.1%ಕ್ಕೆ ಕುಸಿಯಲಿದೆ. ಅಲ್ಲದೆ ಜಾಗತಿಕ ಬೆಳವಣಿಗೆಯ ಅಂದಾಜು 2021ರಲ್ಲಿ 6% ಇದ್ದರೆ, 2022ರಲ್ಲಿ 3.2%ಕ್ಕೆ ಪರಿಷ್ಕರಿಸಲಾಗಿದೆ ಎಂದು ವರದಿ ಹೇಳಿದೆ.

2023ರಲ್ಲಿಜಾಗತಿಕ ಆರ್ಥಿಕತೆಯು ಮೂರನೇ ಒಂದರಷ್ಟು ಪ್ರಮಾಣದಲ್ಲಿ ಸಂಕುಚಿತಗೊಳ್ಳಲಿದೆ. ಈ ವರ್ಷದ ಆಘಾತಗಳು ಸಾಂಕ್ರಾಮಿಕದ ಬಳಿಕ ವಾಸಿಗೊಂಡ ಗಾಯಗಳನ್ನು ಮತ್ತೆ ತೆರಯಲಿದೆ. ಸರಳವಾಗಿ ಹೇಳುವುದಾದರೆ, ಮುಂದೆ ಕೆಟ್ಟ ದಿನಗಳು ಕಾದಿವೆ . ಬಹುತೇಕ ಜನರಿಗೆ 2023 ಆರ್ಥಿಕ ಹಿಂಜರಿತದಂತೆ ಭಾಸವಾಗುತ್ತದೆ ಎಂದು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞ ಪಿಯರೆ-ಒಲಿವರ್ ಗುರಿಂಚಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News