×
Ad

ಸಿಡಿಲು ಬಡಿದು ಯುವಕ ಮೃತ್ಯು

Update: 2022-10-12 19:08 IST

ಬಾಗಲಕೋಟೆ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ  ಮುಧೋಳ ತಾಲೂಕಿನ ವರ್ಚಗಲ್ ಗ್ರಾಮದಲ್ಲಿ ನಡೆದಿದೆ.

ಕೃಷ್ಣಪ್ಪ ಗುಡದನ್ನವರ (30) ಮೃತ ಯುವಕ ಎಂದು ತಿಳಿದು ಬಂದಿದೆ. 

ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆನ್ನಲಾಗಿದೆ. 

ಲೋಕಾಪೂರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,  ಲೋಕಾಪೂರ ಉಪತಹಶೀಲ್ದಾರ್ ಮಹೇಶ್ ಪಾಂಡವ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News