×
Ad

ಶ್ರೀರಾಮುಲು ಕ್ಷೇತ್ರ ಬಿಟ್ಟು ಹೋಗುವ ಯತ್ನ ನಡೆಸಿದ್ದಾರೆ: ಪ್ರಿಯಾಂಕ್ ಖರ್ಗೆ ಟೀಕೆ

Update: 2022-10-13 21:27 IST
ಪ್ರಿಯಾಂಕ್ ಖರ್ಗೆ / ಶ್ರೀರಾಮುಲು

ಚಿತ್ರದುರ್ಗ: ‘ಮೂರು ಚುನಾವಣೆಯಲ್ಲಿಯೂ ಬಿ. ಶ್ರೀರಾಮುಲು (BSriramulu) ಅವರು ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿಲ್ಲ. ಈ ಬಾರಿಯೂ ಅವರು ಕ್ಷೇತ್ರ ಬಿಟ್ಟು ಹೋಗುವ ಯತ್ನ ನಡೆಸಿದ್ದಾರೆ' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಲೇವಡಿ ಮಾಡಿದ್ದಾರೆ.

ಗುರುವಾರ ಜಿಲ್ಲೆಯ ಚಳ್ಳಕೆರೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಳೆದ ಬಾರಿ ಬಿಜೆಪಿ ನಾಯಕರು ಎಲ್ಲಿ ಗೆದ್ದಿದ್ದಾರೆ. ಎಲ್ಲಿಂದ ಶಾಸಕರನ್ನು ಖರೀದಿ ಮಾಡಿದ್ದಾರೆಂದು ಹೇಳಲಿ, ಅಮಿತ್ ಶಾ, ಮೋದಿ ದಿಲ್ಲಿಯಲ್ಲಿ ಇದ್ದಾರೆ, ದಿಲ್ಲಿ ಗೆಲ್ಲೋಕೆ ಅವರಿಗೆ ಏಕೆ ಆಗಿಲ್ಲ' ಎಂದು ಪ್ರಶ್ನಿಸಿದರು.

‘ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ, ಪೇ ಸಿಎಂ ವಿಚಾರ ಮರೆಮಾಚಲು ವೈಯುಕ್ತಿಕ ಟೀಕೆ ಮಾಡುತ್ತಿದ್ದಾರೆ. ಅವರ ಆಡಳಿತದ ಮೇಲೆ ಅವರಿಗೆ ನಂಬಿಕೆ ಇದ್ದರೆ ಅವರು ಪಾದಯಾತ್ರೆ ಮಾಡಲಿ. ಆಗ ಜನ ಜೈಕಾರ ಹಾಕುತ್ತಾರೋ ಅಥವಾ ಕಲ್ಲಲ್ಲಿ ಹೊಡಿತಾರೋ ನೋಡೋಣ. ಬಿಜೆಪಿಯವರು ಮಾಡುವುದು ಜನ ಸಂಕಲ್ಪ ಯಾತ್ರೆಯಲ್ಲ ವಿಜಯೇಂದ್ರಗಾಗಿ ನಡೆಯುವ ಯಾತ್ರೆಯಾಗಿದೆ' ಎಂದು ವಾಗ್ದಾಳಿ ನಡೆಸಿದರು.

ಪಿಎಸ್ಸೈ ನೇಮಕಾತಿಯಲ್ಲಿ ಏನು ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ. ಕನಕಗಿರಿ ಕ್ಷೇತ್ರದ ಶಾಸಕ ಹಾಗೂ ವಿಜಯೇಂದ್ರ ಹೆಸರು ಪಿಎಸ್ಸೈ ಹಗರಣದಲ್ಲಿ ಕೇಳಿ ಬರುತ್ತಿದೆ. ಮೊದಲು ಈ ಬಗ್ಗೆ ತನಿಖೆ ಮಾಡಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News