×
Ad

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ

Update: 2022-10-15 19:33 IST
ಮೃತ ಯುವಕ

ಕಲಬುರಗಿ: ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಯುವಕನೋರ್ವ ಕೊಚ್ಚಿ ಹೋದ ಘಟನೆ ಅಫಜಲಪುರ ತಾಲೂಕಿನ ಬಿದನೂರು ಗ್ರಾಮದ ಹೊರವಲಯದಲ್ಲಿ ವರದಿಯಾಗಿದೆ.

ಶುಕ್ರವಾರ ಸಂಜೆ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಯುವಕ ಕಾಮಣ್ಣ (19) ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಯುವಕ ಕಲಬುರಗಿ ನಗರದ ಬೋರಾಬಾಯಿ ನಗರದ ನಿವಾಸಿಯಾಗಿದ್ದು, ಈ ಸಂಬಂಧ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಖಾಸಗಿ ಟಿವಿ ಚಾನಲ್ ನ ವೀಡಿಯೊ ಜರ್ನಲಿಸ್ಟ್ ಆತ್ಮಹತ್ಯೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News