ನಿವೃತ್ತ ನ್ಯಾಯಮೂರ್ತಿ ಎಸ್‌.ಬಿ.ವಸ್ತ್ರಮಠ್ ​ಗೆ ಪವರ್ ಆಫ್​ ಅಟಾರ್ನಿ ನೀಡಿದ ಮುರುಘಾಶ್ರೀ

Update: 2022-10-15 14:53 GMT

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೊಕ್ಸೊ ಪ್ರಕರಣದಡಿ ಬಂಧಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರು ವಿವಿಧ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ಪವರ್ ಆಫ್​ ಅಟಾರ್ನಿಯನ್ನು ನಿವೃತ್ತ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.

ನ್ಯಾಯಾಂಗ ಬಂಧನದಲ್ಲಿರುವ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಪವರ್ ಆಫ್ ಅಟಾರ್ನಿ ಜಾರಿಗೆ ಹೈಕೋರ್ಟ್ ಅನುಮತಿ ನೀಡಿತ್ತು. ಹೈಕೋರ್ಟ್ ಅನುಮತಿ ನೀಡಿದ ಬಳಿಕ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯೂ ಆಗಿರುವ ವಸ್ತ್ರಮಠ್  ಅವರಿಗೆ ಮುರುಘಾಶ್ರೀ  ಪವರ್ ಆಫ್​ ಅಟಾರ್ನಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಕಾರಾಗೃಹದಲ್ಲಿರುವ ಹಿನ್ನೆಲೆ ವಿವಿಧ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ತೊಂದರೆಯಾಗಿತ್ತು. ಹೀಗಾಗಿ ಮುರುಘಾ ಶರಣರಿಗೆ ಪವರ್ ಆಫ್ ಅಟಾರ್ನಿ ಜಾರಿಗೆ ಹೈಕೋರ್ಟ್ ಅನುಮತಿ ನೀಡಿತ್ತು. 

ಇದನ್ನೂ ಓದಿ: ಕಾರಾಗೃಹದಿಂದಲೇ ಚೆಕ್ ಗೆ ಸಹಿ ಹಾಕಲು ಅನುಮತಿ ಕೋರಿದ ಮುರುಘಾ ಶ್ರೀ: ಹೈಕೋರ್ಟ್ ಅತೃಪ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News