×
Ad

ಕಲಬುರಗಿ: ಇಬ್ಬರು ವ್ಯಾಪಾರಿಗಳ ನಡುವೆ ಜಗಳ; ಓರ್ವನ ಕೊಲೆ

Update: 2022-10-17 11:40 IST

ಕಲಬುರಗಿ:  ಇಬ್ಬರು ಹಣ್ಣಿನ ವ್ಯಾಪಾರಿಗಳ ನಡುವೆ ಜಗಳ ನಡೆದು, ಓರ್ವನ ಕೊಲೆ ಮಾಡಲಾದ ಘಟನೆ ಇಲ್ಲಿನ ಆಳಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ನಿನ್ನೆ ರಾತ್ರಿ ನಡೆದಿದೆ.

ಪಟ್ಟಣದ ರೇವಣ ಸಿದ್ದೇಶ್ವರ ಕಾಲನಿ ನಿವಾಸಿ ಕರೀಂ ಬಾಗವಾನ್ (27) ಹತ್ಯೆಯಾದ ಹಣ್ಣಿನ ವ್ಯಾಪಾರಿ.

ವ್ಯಾಪಾರಕ್ಕೆ ಸಂಬಂಧಿಸಿದಂತೆ ವಾಜೀದ್ ಉಸ್ಮಾನ್ ಮತ್ತು ಕರೀಂ ನಡುವೆ ಜಗಳ‌ ನಡೆದು ಅದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಕತ್ತು ಕೊಯ್ದು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ ಎನ್ನಲಾಗಿದೆ.

ಹತ್ಯೆ ಮಾಡಿರುವ ಆರೋಪಿ ವಾಜೀದ್ ಮತ್ತು ಕರೀಂ ಇಬ್ಬರು ಸಂಬಂಧಿ ಎಂದು ತಿಳಿದು ಬಂದಿದ್ದು, ಇಬ್ಬರ ಜಗಳವನ್ನು ಬಿಡಿಸಲು ಹೋಗಿದ್ದ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ವಾಜೀದ್ ನನ್ನು ಆಳಂದ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News