ಜೆ.ಪಿ. ನಡ್ಡಾ ಯಾರ ರಬ್ಬರ್ ಸ್ಟಾಂಪ್ ಎಂಬುದು ಜಗತ್ತಿಗೆ ತಿಳಿದ ವಿಚಾರ: ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

Update: 2022-10-17 09:10 GMT

ಬೆಂಗಳೂರು:  ''ನಿಮ್ಮ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಯಾರ ರಬ್ಬರ್ ಸ್ಟಾಂಪ್ ಎಂಬುದು ಜಗತ್ತಿಗೆ ತಿಳಿದ ವಿಚಾರ. ಅಂದಹಾಗೆ ನಡ್ಡಾರನ್ನು ತಾವು ರೀ ಎಲೆಕ್ಟ್ ಮಾಡಿದ್ದೋ, ರೀ ಸೆಲೆಕ್ಟ್ ಮಾಡಿದ್ದೋ? ಬಿಜೆಪಿಯಲ್ಲಿ ಧಮ್ಮು, ತಾಕತ್ತು ಮತ್ತು ಆಂತರಿಕ ಪ್ರಜಾಪ್ರಭುತ್ವ ಇದ್ದರೆ ಚುನಾವಣೆಯ ಮೂಲಕ ಅಧ್ಯಕ್ಷರನ್ನ ಆಯ್ಕೆ ಮಾಡಿ ತೋರಿಸಲಿ. ಇದು ಸಾಧ್ಯವೇ?'' ಎಂದು ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ತಮ್ಮಲ್ಲಿನ ಆಂತರಿಕ ಪ್ರಜಾಪ್ರಭುತ್ವ ತೋರಿಸಲು ಸಾಧ್ಯವಾಗದ, ನಾಗಪುರದ ಆದೇಶ ಮೀರಿ ತಮ್ಮ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲದ, ನಾಗಪುರದ ರಬ್ಬರ್ ಸ್ಟಾ‌ಂಪ್‌ಗಳಾದ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ'' ಎಂದು ಕಿಡಿಕಾರಿದೆ. 

''ಪ್ರಧಾನಿ ಮೋದಿ, RSSನ ರಬ್ಬರ್ ಸ್ಟಾಂಪ್‌,  ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿ.ಎಲ್ ಸಂತೋಷ್ ರಬ್ಬರ್ ಸ್ಟಾಂಪ್‌,  ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅಮಿತ್ ಷಾ ರಬ್ಬರ್ ಸ್ಟಾಂಪ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಶವಕೃಪದ ರಬ್ಬರ್ ಸ್ಟಾಂಪ್‌ ಇಡೀ ಬಿಜೆಪಿ ಪಕ್ಷ ನಾಗಪುರದ ರಬ್ಬರ್ ಸ್ಟಾಂಪ್‌ ಇಲ್ಲ ಎನ್ನುವಿರಾ'' ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News