×
Ad

ಮೈಸೂರು ಅರಮನೆ ಕೋಟೆಯ ಗೋಡೆ ಕುಸಿತ; ದುರಸ್ತಿ ಕಾರ್ಯ ಆರಂಭ

Update: 2022-10-18 21:52 IST

ಮೈಸೂರು,ಅ.18: ವಿಶ್ವ ವಿಖ್ಯಾತ  ಮೈಸೂರು ಅರಮನೆಯ ರಕ್ಷಣೆಗಾಗಿ ನಿರ್ಮಿಸಿದ್ದ ಕೋಟೆಯ ಗೋಡೆ ಮಂಗಳವಾರ ಕುಸಿದಿದೆ. ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಮತ್ತು ಜಯಮಾರ್ತಾಂಡ ದ್ವಾರದ ನಡುವಿನ ಕೋಟೆಯ ಗೋಡೆ ಕೆಲ ದಿನಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಇಂದು ಬೆಳಗಿನ ಜಾವ ಕುಸಿದಿದೆ.

ಅಂಬಾವಿಲಾಸ ಅರಮನೆಯ ಸುತ್ತಲೂ ನಿರ್ಮಾಣ ಮಾಡಿರುವ ಕೋಟೆಗೆ 220 ವರ್ಷಗಳ ದೊಡ್ಡ ಇತಿಹಾಸವಿದೆ. ಅಂದಿನ ಅರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ಈ ಆಕರ್ಷಕ ಕೋಟೆಯನ್ನು ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿತ್ತು.

ನಿರಂತರ ಮಳೆಗೆ ಅರಮನೆಯ ಕೋಟೆ ಕುಸಿಯುವ ಹಂತ ತಲುಪಿತ್ತು. ಕೋಟೆ ದುರಸ್ತಿಗೆ ಅರಮನೆ ಮಂಡಳಿ, ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ಕಾರಣ ಇದೀಗ ಕೋಟೆ ಕುಸಿದು ಬಿದ್ದಿದೆನ್ನಲಾಗಿದೆ.

ಸ್ಥಳಕ್ಕೆ ಇತಿಹಾಸ ತಜ್ಞರು ಮತ್ತು ಪಾರಂಪರಿಕ ಇಲಾಖೆ ಅಧಿಕಾರಿಗಳು ಭೆಟಿ ನೀಡಿ ಪರಿಶೀಲನೆ ನಡೆಸಿದ್ದು, ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಕುಸಿದಿರುವ ಗೋಡೆಗೆ ಟಾರ್ಪಾಲ್ ಹೊದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News