×
Ad

‘Paycm’ ಬಳಿಕ ‘Saycm’ಅಭಿಯಾನ ಆರಂಭಿಸಿದ ಕಾಂಗ್ರೆಸ್‌

Update: 2022-10-19 10:28 IST

ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 613 ಭರವಸೆಗಳಲ್ಲಿ 90% ನ್ನು ಪೂರೈಸಲಾಗದೆ ವಿಫವಾಗಿದೆ.

ಹುಸಿಯಾಗಿಯೇ ಉಳಿದಿರುವ ಭರವಸೆಗಳ ಬಗ್ಗೆ ಸಿಎಂ ಉತ್ತರಿಸಬೇಕು #NimHatraIdyaUttara #SayCM pic.twitter.com/K9SYY5zb7t

— Karnataka Congress (@INCKarnataka) October 19, 2022

ಬೆಂಗಳೂರು, ಅ.19: ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ಎಷ್ಟೊಂದು ಭರವಸೆ ಈಡೇರಿಸಿದೆ ಎಂದು ಪ್ರಶ್ನಿಸಲು ಪೇ ಸಿಎಂ ಜೊತೆಗೆ ‘ಸೇ-ಸಿಎಂ’ (ಹೇಳಿ ಸಿಎಂ) ಅಭಿಯಾನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ಇದೀಗ ಹಲವು ಪ್ರಶ್ನೆಗಳನ್ನು ಮುಂದಿಟ್ಟು  ‘Saycm’ ಅಭಿಯಾನ ಆರಂಭಿಸಿದೆ. 

ಈ ಸಂಬಂಧ Saycm ಪೋಸ್ಟರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ  ಕಾಂಗ್ರೆಸ್, ''ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 613 ಭರವಸೆಗಳಲ್ಲಿ 90% ನ್ನು ಪೂರೈಸಲಾಗದೆ ವಿಫವಾಗಿದೆ. ಹುಸಿಯಾಗಿಯೇ ಉಳಿದಿರುವ ಭರವಸೆಗಳ ಬಗ್ಗೆ ಸಿಎಂ ಉತ್ತರಿಸಬೇಕು'' ಎಂದು ಆಗ್ರಹಿಸಿದೆ. 

''ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ?’ ಎಂಬ ಅಭಿಯಾನದ ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ 50 ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ, ಈವರೆಗೂ ಒಂದು ಪ್ರಶ್ನೆಗೂ ಉತ್ತರಿಸಿಲ್ಲ'' ಎಂದು ಕಾಂಗ್ರೆಸ್ ಹೇಳಿದೆ.

''ಬಿಜೆಪಿ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತಾವು ಪಡೆಯುವ ಕಮಿಷನ್ನಿನ ಶೇಕಡಾದಷ್ಟಾದರೂ ಈಡೇರಿಸಿದ್ದರೆ ಸಾಕಿತ್ತು! ಕಮಿಷನ್ 40% ಆದರೆ ಈಡೇರಿಸದೆ ಉಳಿದ ಭರವಸೆಗಳು 90%! ಅಭಿವೃದ್ಧಿಯಲ್ಲಿ ಕುರುಡಾಗಿರುವ ಸರ್ಕಾರ, ಪ್ರಶ್ನೆಗಳಿಗೆ ಕಿವುಡಾಗಿರುವ ಸಚಿವರು ತಮ್ಮದೇ ಭರವಸೆಗಳ ಬಗ್ಗೆ ಮತನಾಡುವರೇ? ಸಿಎಂ ಉತ್ತರಿಸುವರೇ?'' ಎಂದು ಪ್ರಶ್ನಿಸಿದೆ. 

ಇದನ್ನೂ ಓದಿ: ಪೇ ಸಿಎಂ ಜತೆ ‘Saycm’ ಅಭಿಯಾನ: ಪ್ರಿಯಾಂಕ್ ಖರ್ಗೆ

ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿ ಎಂಬ ರಿಷಬ್‌ ಶೆಟ್ಟಿ ಹೇಳಿಕೆ ಸರಿಯಲ್ಲ: ನಟ ಚೇತನ್‌ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News