ಬೆಂಗಳೂರು | ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ ಪ್ರಕರಣ: ಆರೋಪಿ ಬಂಧನ

Update: 2022-10-19 07:51 GMT

ಬೆಂಗಳೂರು, ಅ.19: ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿ ವಿಲಿಯಮ್ ಪ್ರಕಾಶ್ ಎಂಬಾತನನ್ನು ಬಂಧಿಸಿರುವ ಅಶೋಕ್ ನಗರ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. 

ಸೆ.10ರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ಈ ಸಂಬಂಧ ಸಾಮಾಜಿಕ ಹೋರಾಟಗಾರರ ಸಹಾಯದಿಂದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರನ್ನು ದಾಖಲಿಸಿದ್ದರು.

ಘಟನೆ ವಿವರ: ಗಣೇಶ ವಿಸರ್ಜನೆ ಮಾಡಲು ಶಾಂತಲಾ ನಗರದಲ್ಲಿ ಸೆ.10ರ ರಾತ್ರಿ 8.30ಕ್ಕೆ ಮೆರವಣಿಗೆ ಹೋಗುತ್ತಿತ್ತು. ಪಕ್ಕದಲ್ಲಿದ್ದ ಚರ್ಚ್ ಲೈಟ್ ಆಫ್ ಮಾಡಲು ಹೊರಟಿದ್ದ ಮಹಿಳೆಯ ಹಿಂದೆಯೇ ಚರ್ಚ್ ಒಳಗೆ ನುಗ್ಗಿದ ಆರೋಪಿ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆನ್ನಲಾಗಿದ್ದು,  ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು.  

ಇದನ್ನೂ ಓದಿ:  ಬೆಂಗಳೂರು | ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ: ದೂರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News