×
Ad

ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ: ಕಾಂಗ್ರೆಸ್ ಟೀಕೆ

Update: 2022-10-19 19:02 IST

ರಾಜ್ಯದ ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ!

ಮುಖ್ಯಮಂತ್ರಿಗಳು ನಿದ್ದೆ ಮಾಡುವ ಸಮಯವನ್ನು "ಜನಸಂಕಲ್ಪ" ಎಂದು ಕರೆದುಕೊಳ್ಳುತ್ತಿದೆ @BJP4Karnataka.

ಹೇಳಲು ಸಾಧನೆಗಳು ಇಲ್ಲದಾಗ ನಿದ್ದೆ ಬರುವುದು ಸಹಜ ಅಲ್ಲವೇ #PayCM ಅವರೇ?#NimHatraIdyaUttara pic.twitter.com/veqYZcFEJO

— Karnataka Congress (@INCKarnataka) October 19, 2022

ಬೆಂಗಳೂರು, ಅ.19: ರಾಜ್ಯದ ಚಿಂತೆ ಇಲ್ಲದ ಮುಖ್ಯಮಂತ್ರಿಗೆ ಸಂತೆಯಲ್ಲೂ ನಿದ್ದೆ. ಮುಖ್ಯಮಂತ್ರಿಗಳು ನಿದ್ದೆ ಮಾಡುವ ಸಮಯವನ್ನು ‘ಜನಸಂಕಲ್ಪ’ ಎಂದು ಕರೆದುಕೊಳ್ಳುತ್ತಿದೆ ರಾಜ್ಯ ಬಿಜೆಪಿ. ಹೇಳಲು ಸಾಧನೆಗಳು ಇಲ್ಲದಾಗ ನಿದ್ದೆ ಬರುವುದು ಸಹಜ ಅಲ್ಲವೇ ‘ಪೇ ಸಿಎಂ’ ಅವರೇ? ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಸರಕಾರದ ಅಕ್ರಮಗಳ ದಾಖಲೆ ಕಳಿಸುತ್ತೇನೆ ಎಂದಿದ್ದಾರೆ ‘ಪೇ ಸಿಎಂ’, ರಾಹುಲ್ ಗಾಂಧಿ ಅವರೇನು ಐಟಿ, ಈ.ಡಿ, ಸಿಬಿಐಗಳ ಮುಖ್ಯಸ್ಥರೆ? ದಾಖಲೆಗಳಿದ್ದರೆ ನ್ಯಾಯಾಂಗ ತನಿಖೆ ನಡೆಸಲು ಹಿಂಜರಿಕೆ ಏಕೆ ಬಸವರಾಜ ಬೊಮ್ಮಾಯಿ ಅವರೇ? ಕಾಂಗ್ರೆಸ್ ಅಕ್ರಮ ಎನ್ನುವ ಬಿಜೆಪಿ ಹಾವೇ ಇಲ್ಲದ ಬುಟ್ಟಿಯ ಮುಂದೆ ಪುಂಗಿ ಊದುತ್ತಿದೆ ಎಂದು ವ್ಯಂಗ್ಯವಾಡಿದೆ.

ರೀ ಸ್ವಾಮಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಮಾತಿಗೆ ಅಳಬೇಕೊ ನಗಬೇಕೋ ತಿಳಿಯುತ್ತಿಲ್ಲ. ದಾಖಲೆ ಇದ್ದರೆ ಸಿಐಡಿಗೋ, ಐಟಿ, ಈ.ಡಿ, ಸಿಬಿಐಗೋ ಕೊಡದೇ ರಾಹುಲ್ ಗಾಂಧಿ ಒಪ್ಪಿಗೆಗೆ ಕಾಯುತ್ತಿದ್ದೀರಾ? ಸಿದ್ದರಾಮಯ್ಯ ಎಲ್ಲ ನೇಮಕಾತಿಗಳನ್ನು, ಹಗರಣಗಳನ್ನೂ ತನಿಖೆಗೆ ಒಪ್ಪಿಸಿ ಎಂದು ಅಂದೇ ಹೇಳಿಲ್ಲವೇ? ಯಾಕೆ ದಮ್ಮು ತಾಕತ್ತು ಇಲ್ಲವೇ? ಎಂದು ಕಾಂಗ್ರೆಸ್ ಸವಾಲು ಸವಾಲು ಹಾಕಿದೆ.

ಬಿಜೆಪಿಯದ್ದು ಜನಸಂಕಲ್ಪವಲ್ಲ ಜನವಿರೋಧ ಸಮಾವೇಶ. ಭರವಸೆ ನೀಡಿ ಕೈ ಎತ್ತಿತ್ತು, ನೆರೆ ಪರಿಹಾರ ನೀಡದೆ ಕೈ ಎತ್ತಿತ್ತು, ಗುತ್ತಿಗೆದಾರರ ಬಿಲ್ ನೀಡದೆ ಕೈ ಎತ್ತಿತ್ತು, ನೌಕರರಿಗೆ ಸಂಬಳ ಕೊಡದೆ ಕೈ ಎತ್ತಿತ್ತು, ಜನ ಚುನಾವಣೆ ಬಂದಾಗ ಕೈ ಎತ್ತುತ್ತಾರೆ. ವಿಡಿಯೋ ಮಾಡುವ ಬೆದರಿಕೆ ಏಕೆ ರಾಜ್ಯ ಬಿಜೆಪಿ? ಕೈ ಎತ್ತದವರ ಮನೆಗೆ ಐಟಿ, ಈ.ಡಿ ಕಳಿಸುವಿರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News