ಸೀಟ್ ಬೆಲ್ಟ್ ಧರಿಸದಿದ್ದರೆ ರಾಜ್ಯದಲ್ಲಿ ಇನ್ನು ಮುಂದೆ ದಂಡ ದುಪ್ಪಟ್ಟು!

Update: 2022-10-19 14:29 GMT
photo- twitter

ಬೆಂಗಳೂರು, ಅ.19: ರಾಜ್ಯ ವ್ಯಾಪಿ ವಾಹನ ಸವಾರರು ಸೀಟ್‍ಬೆಲ್ಟ್ ಧರಿಸದೆ ಇದ್ದ ಪ್ರಕರಣ ಬೆಳಕಿಗೆ ಬಂದರೆ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಪ್ರಕಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಹೊಸ ಆದೇಶ ಹೊರಡಿಸಿದ್ದು, ಸೀಟ್‍ಬೆಲ್ಟ್ ಧರಿಸದೆ ಸಿಕ್ಕಿಹಾಕಿಕೊಂಡರೆ 1 ಸಾವಿರ ರೂ. ದಂಡ ಪಾವತಿ ಬೇಕಾಗಿದೆ. ಅಲ್ಲದೆ, ಈ ಹಿಂದೆ 500 ರೂ. ಇದ್ದ ದಂಡವನ್ನು ಪರಿಷ್ಕೃತ ಆದೇಶದಲ್ಲಿ ದುಟ್ಟಪ್ಪು ಮಾಡಲಾಗಿದೆ.

ಮೈಸೂರು ನಗರ, ಹುಬ್ಬಳ್ಳಿ, ಧಾರವಾಡ ನಗರ, ಮಂಗಳೂರು ನಗರ, ಬೆಳಗಾವಿ ಮತ್ತು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈ ಆದೇಶವನ್ನು ಹೊರಡಿಸಲಾಗಿದೆ.

ಅಲ್ಲದೆ, ನ.1ರಿಂದ ಜಾರಿಗೆ ಬರುವಂತೆ ಹೊಸದಿಲ್ಲಿ, ಮುಂಬೈನಲ್ಲಿ ವಾಹನ ಚಾಲನೆ ವೇಳೆಯಲ್ಲಿ ಸೀಟ್‍ಬೆಲ್ಟ್ ಕಡ್ಡಾಯಗೊಳಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಖರ್ಗೆಗೆ ಮುಳುಗುವ ಹಡಗಿನ ಸ್ಟೇರಿಂಗ್ ಕೊಟ್ಟಿದ್ದಾರೆ: ಸಿಎಂ ಬೊಮ್ಮಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News