×
Ad

ಕಲಬುರಗಿ | ಜಾತ್ರೆಯಲ್ಲಿ ಸಿಡಿಮದ್ದು ಸಿಡಿದು ಬಾಲಕ ಸೇರಿ 12ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

Update: 2022-10-22 00:12 IST

ಕಲಬುರಗಿ: ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಮರಗಮ್ಮದೇವಿ ಜಾತ್ರೆಯಲ್ಲಿ ಸಿಡಿಮದ್ದು ಸ್ಫೋಟಗೊಂಡು 12ಕ್ಕೂ ಹೆಚ್ಚು ಜನರಿಗೆ  ಗಂಭೀರ ಗಾಯಳಾಗಿದ್ದು, ಅವರೆಲ್ಲರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಮರಗಮ್ಮ ದೇವಿ ಜಾತ್ರೆ ಹಾಗೂ ಈ ಹಿಂದೆ ಭಗ್ನವಾದ 15 ದೇವಿಗಳ ಮೂರ್ತಿ ಮರು ಪ್ರತಿಷ್ಠಾಪನೆಯನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾತ್ರೆಯಲ್ಲಿ ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಗುತ್ತಿತ್ತು. ಆಕಾಶದತ್ತ ಮದು ಸಿಡಿಸಿದಾಗ ಬೆಂಕಿಯ ಕಿಡಿ ಪಕ್ಕದಲ್ಲಿಯೇ ಇದ್ದ ಅಧಿಕ ಪ್ರಮಾಣದ ಮದ್ದಿನ ಮೇಲೆ ಬಿದ್ದು ಅವಘಡ ಸಂಭವಿಸಿದೆನ್ನಲಾಗಿದೆ.

ಅಂದಾಜು ಐದು ಕೆಜಿಯಷ್ಟಿದ್ದ ಸಿಡಿಮದ್ದು ಸಿಡಿದಾಗ ಹಲವರು ಗಾಯಗೊಂಡಿದ್ದು, ಮದ್ದು ಸಿಡಿಸುವ ವ್ಯಕ್ತಿ, ಓರ್ವ ಮಗು ಸೇರಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. 

ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡವರು ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News