17 ಸಾವಿರಕ್ಕೂ ಅಧಿಕ ಧ್ವನಿವರ್ಧಕಗಳಿಗೆ ಅನುಮತಿ ನೀಡಿದ ರಾಜ್ಯ ಸರ್ಕಾರ

Update: 2022-10-22 05:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಒಟ್ಟು 17,850 ಧ್ವನಿವರ್ಧಕಗಳ ಬಳಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಇದರಲ್ಲಿ ಪ್ರಾರ್ಥನಾ ಕೇಂದ್ರಗಳೂ ಸೇರಿವೆ. 

ಧ್ವನಿವರ್ಧಕಗಳ ಬಳಕೆ ನಿಯಂತ್ರಣ ನಿಯಮಗಳ ಅಡಿಯಲ್ಲಿ ಪರವಾನಗಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಮೇ 10ರಂದು ಗೃಹ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಅರ್ಜಿಗಳ ಪರಿಶೀಲನ ಪೂರ್ಣಗೊಳಿಸಿರುವ ಗೃಹ ಇಲಾಖೆ, ಪ್ರಾರ್ಥನಾ ಕೇಂದ್ರ ಸೇರಿದಂತೆ ರಾಜ್ಯದಲ್ಲಿ ಒಟ್ಟು 17,850 ಕಡೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಿದೆ. 

ಈ ಕುರಿತು ಸುತ್ತೋಲೆ ಹೊರಡಿಸಿದ ರಾಜ್ಯ ಸರಕಾರ,  ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಿದ್ದು, 450ರೂ ಶುಲ್ಕ ವಿಧಿಸಲಾಗಿದೆ. 

ಇದನ್ನೂ ಓದಿ: ನಟ ಚೇತನ್‍ಗೆ ಮಸಿ ಬಳಿಯಲು ತೆರಳುತ್ತಿದ್ದ ಸಂಘಪರಿವಾರದ 12 ಮಂದಿ ಕಾರ್ಯಕರ್ತರು ವಶಕ್ಕೆ

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗಿನ ಅವಧಿಯಲ್ಲಿ ಮಸೀದಿಗಳಲ್ಲೂ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಬಾರದು ಎಂದು ಸಂಘಪರಿವಾರದ ಕಾರ್ಯಕರ್ತರು ಆಝಾನ್‌ ವಿರೋಧಿಸಿ ಕೆಲವೆಡೆ ದೇವಸ್ಥಾನಗಳಲ್ಲಿ ಹನುಮಾನ್‌ ಚಾಲೀಸಾ ಪಠಣವನ್ನೂ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News