'ಮುಂದಿನ ಚುನಾವಣೆಯಲ್ಲಿ ಶಾಸಕ ದಢೇಸುಗೂರುಗೆ ಟಿಕೆಟ್ ಬೇಡ': ನಾಯಕರ ಮೇಲೆ ಒತ್ತಡ ಹೇರಲು BJP ಕಾರ್ಯಕರ್ತರ ನಿರ್ಧಾರ

Update: 2022-10-22 06:31 GMT
ಬಸವರಾಜ ದಢೇಸುಗೂರು

ಕೊಪ್ಪಳ: ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸುಗೂರು ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಪಕ್ಷದ ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ಕೊಪ್ಪಳ ಜಿಲ್ಲೆಯ ಬಿಜೆಪಿ ಮುಂಖಂಡರು ಸಭೆಯೊಂದರಲ್ಲಿ ತೀರ್ಮಾನಿಸಿದ್ದಾರೆ. 

ಇತ್ತೀಚೆಗೆ ಪಿಎಸ್ಐ‌ ನೇಮಕಾತಿ ಮಾಡಿಸಿಕೊಡುವುದಾಗಿ‌ ಹೇಳಿ ವ್ಯಕ್ತಿಯೊಬ್ಬರಿಂದ 15 ಲಕ್ಷ ರೂ. ಪಡೆದ ಬಗ್ಗೆ ಶಾಸಕ ಬಸವರಾಜ ದಢೇಸುಗೂರು ಅವರ ಮೇಲೆ ಆರೋಪ ಕೇಳಿಬಂದಿತ್ತು. ಈ ಕುರಿತ ಅಡಿಯೋ ಒಂದು ವೈರಲ್ ಆದ ಬಳಿಕ ಕೊಪ್ಪಳ ಜಿಲ್ಲಾ ಬೆಜೆಪಿಗೆ ಈ ಪ್ರಕರಣ ಮುಜುಗರ ತಂದಿದೆ ಎಂದು ಮುಖಂಡರು ಶಾಸಕ ದಢೇಸುಗೂರು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. 

ಶುಕ್ರವಾರ ಜಿಲ್ಲೆಯ ಕಾರಟಗಿಯಲ್ಲಿ ಸಭೆ ನಡೆಸಿದ ಕೆಲವು ಮುಖಂಡರು,  ಶಾಸಕರ ಈ ಎಲ್ಲಾ ವರ್ತನೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡಿದೆ. ಹೀಗಾಗಿ ದಢೇಸುಗೂರು ಅವರಿಗೆ ಟಿಕೆಟ್ ನಿಡದಂತೆ ಹಾಗೂ ಹೊಸ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿPSI ನೇಮಕಾತಿ ಹಗರಣ: ವೈರಲ್ ಆದ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದ ಬಿಜೆಪಿ ಶಾಸಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News