ಕಲಬುರಗಿ: ದೀಪಾವಳಿ ಬೋನಸ್ ನೀಡಿಲ್ಲ ಎಂದು ಟವರ್ ಏರಿದ ಕಾರ್ಮಿಕ
Update: 2022-10-22 14:15 IST
ಕಲಬುರಗಿ: ಜೆ.ಪಿ.ಸಿಮೆಂಟ್ ಕಾರ್ಖಾನೆ ದೀಪಾವಳಿ ಬೋನಸ್ ನೀಡಿಲ್ಲ ಎಂದು ಕಾರ್ಮಿಕನೋರ್ವ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಮೊಹಮ್ಮದ್ ರಶೀದ್ ಟವರ ಏರಿ ಪ್ರತಿಭಟನೆ ನಡೆಸಿದ ಕಾರ್ಮಿಕ.
ಕಾರ್ಖಾನೆಯ ನಿಯಮ ಪ್ರಕಾರ ಬೋನಸ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ರಶೀದ್ ಬೋನಸ್ ನೀಡುವವರೆಗೂ ಕೆಳಗಿಳಿಯಲ್ಲ ಎಂದು ಹಠ ಹಿಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.