ಶಾಸಕ ಜಿ.ಟಿ.ದೇವೇಗೌಡರ ನಡೆ, ಮೀನಿನ ಹೆಜ್ಜೆ ಎರಡೂ ಕಂಡುಹಿಡಿಯೋದು ಕಷ್ಟ: ಸಚಿವ ಎಸ್.ಟಿ.ಸೋಮಶೇಖರ್

Update: 2022-10-22 15:11 GMT

ಮೈಸೂರು,ಅ.22: 'ಮೀನಿನ ಹೆಜ್ಜೆ, ಜಿ.ಟಿ. ದೇವೇಗೌಡರ ನಡೆಯನ್ನು ಯಾರಿಂದಲೂ ಕಂಡುಹಿಡಿಯಲು ಆಗಲ್ಲ ಎಂದು ಈ ಹಿಂದೆಯೇ ಹೇಳಿದ್ದೆ, ಈಗ ನಿಜ ಆಗಿದೆ' ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಜಿ.ಟಿ.ದೇವೇಗೌಡ ಅವರನ್ನು ಬಿಜೆಪಿಯವರು ಕರೆದಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದೆವು. ಅವರು ಜೆಡಿಎಸ್ ಟಿಕೆಟ್ ಮೇಲೆ ಗೆದ್ದಿದ್ದು ಈಗ ಅಲ್ಲೆ ಉಳಿದಿದ್ದಾರೆ'' ಎಂದರು.

'ದಸರಾದಲ್ಲಿ ಖರ್ಚುಮಾಡಲಾಗಿರುವ ಲೆಕ್ಕವನ್ನು ಶೀಘ್ರದಲ್ಲಿ ನೀಡಲಾಗುವುದು. ಎರಡು ಕಮಿಟಿಗಳಿಗೆ ಆದಷ್ಟು ಬೇಗ ಲೆಕ್ಕ ನೀಡುವಂತೆ ಸೂಚುಸಲಾಗಿದೆ' ಎಂದು ಹೇಳಿದರು.

''ದಸರಾ ಮಹೋತ್ಸವ 2022ರ ಖರ್ಚುವೆಚ್ಚದ ಮಾಹಿತಿ ಕೇಳಲಾಗಿದೆ. 2 ಕಮಿಟಿಗಳು ಮಾಹಿತಿ ಸಲ್ಲಿಕೆ ಮಾಡಿಲ್ಲ. ಅವರು ವರದಿ ಸಲ್ಲಿಸಿದ ಬಳಿಕ ದಸರಾದ ಖರ್ಚುವೆಚ್ಚಗಳ ಲೆಕ್ಕ ನೀಡಲಾಗುವುದು. ಸರ್ಕಾರದ ನಿಯಮದಂತೆ ಮೈಸೂರು ಜಿಲ್ಲಾಧಿಕಾರಿಗಳ ವರ್ಗವಣೆಯಾಗಿದೆ ಎಂದು ತಿಳಿಸಿದರು.

'ಸರ್ಕಾರದ ನಿಯದಂತೆ ಮೈಸೂರು ಜಿಲ್ಲಾಧಿಕಾರಿಗಳ ವರ್ಗಾವಣೆಯಾಗಿದೆ. ಆಡಳಿತದ ದೃಷ್ಟಿಯಿಂದು ಈ ಬದಲಾವಣೆಯಾಗಿದೆ' ಎಂದು ಹೇಳಿದರು.

'ಮಳೆ ಹಾನಿ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಮಳೆಹಾನಿ ಬಗ್ಗೆ ವರದಿ ಪಡೆದು ಮುಖ್ಯಮಂತ್ರಿಗಳಿಗೆ ತಿಳಿಸಲಾಗುತ್ತದೆ. ನಿರೀಕ್ಷೆಗೂ ಮೀರಿ ಮಳೆ ಆಗುತ್ತಿದೆ. ಮಳೆ ನಿಂತ ಮೇಲೆ ಎಲ್ಲಾ ವ್ಯವಸ್ಥೆ ಆಗುತ್ತದೆ' ಎಂದು ಹೇಳಿದರು.

'ಚಾಮುಂಡೇಶ್ವರಿ ಕ್ಷೇತ್ರ  ಮಾತ್ರವಲ್ಲ 224 ಕ್ಷೇತ್ರದಲ್ಲೂ ಸಮರ್ಥ ಅಭ್ಯರ್ಥಿಗಳಿದ್ದಾರೆ. ಮುಂದೆಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ' ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News