×
Ad

ರಾಜಕೀಯಕ್ಕೆ ಮರಳುವ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ: ಮಾಜಿ ಸಚಿವ ಜನಾರ್ದನರೆಡ್ಡಿ

Update: 2022-10-24 19:06 IST
ಜನಾರ್ದನ ರೆಡ್ಡಿ

ಬಳ್ಳಾರಿ, ಅ.24: ‘ರಾಜಕೀಯಕ್ಕೆ ವಾಪಸ್ ಆಗುವ ಮತ್ತು 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಈಗಲೇ ನಾನೇನೂ ಹೇಳಲಾರೆ. ನ.6ರ ನಂತರ ನಾನು ಬಳ್ಳಾರಿ ತೊರೆಯಬೇಕೆಂದು ನ್ಯಾಯಾಲಯ ಆದೇಶಿಸಿದೆ' ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಸೋಮವಾರ ಬಳ್ಳಾರಿ ಜಿಲ್ಲೆಯ ಕುರುಗೋಡಿನಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಕುರುಗೋಡು ದೊಡ್ಡ ಬಸವೇಶ್ವರ ದೇವಸ್ಥಾನ ಹಾಗೂ ಹಜರತ್ ಖಾದರಲಿಂಗ ಅವರ ಗೋರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ನಾನು ಗಂಗಾವತಿ ತಾಲೂಕು ಅಥವಾ ಸುತ್ತಮುತ್ತ ನೆಲೆಸುವೆ. ಈ ಭಾಗದ ಗಾಳಿ ಸೇವಿಸುತ್ತಿದ್ದರೆ ಸಾಕು ನಾನು ಬಳ್ಳಾರಿಯಲ್ಲಿರುವ ಭಾವನೆ ಬರಲಿದೆ. ಅಲ್ಲದೆ, ರಾಜಕೀಯಕ್ಕೆ ವಾಪಸ್ ಆಗುವ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುವೆ ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡ ಐನಾತರೆಡ್ಡಿ ಸೇರಿ ಇನ್ನಿತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News