ಕರ್ನಾಟಕದಲ್ಲಿ ಬ್ರಾಹ್ಮಣ್ಯದ ಹಲವಾರು ಪಕ್ಷಗಳಿವೆ, ಇನ್ನೊಂದರ ಅಗತ್ಯವಿಲ್ಲ: ಕೇಜ್ರಿವಾಲ್ ಹೇಳಿಕೆಗೆ ನಟ ಚೇತನ್ ವಿರೋಧ

Update: 2022-10-27 06:23 GMT

ಬೆಂಗಳೂರು: 'ಹೊಸ ನೋಟುಗಳ ಮೇಲೆ ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳನ್ನು ಅಳವಡಿಸಬೇಕು' ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ನಟ ಚೇತನ್ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ಫೋಟೋಗಳನ್ನು ಮುದ್ರಿಸಿ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆಗ್ರಹಿಸಿದ್ದಾರೆ. ಇದರಿಂದ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದು ಕೂಡ ವಾದಿಸಿದ್ದಾರೆ. ಇದು ಎಷ್ಟು ಅಸಂಬದ್ಧವಾದ ಹೇಳಿಕೆ?' ಎಂದು ಪಶ್ನೆ ಮಾಡಿದ್ದಾರೆ.

'ಇಂತಹ ಅಸಾಂವಿಧಾನಿಕ, ಮೌಢ್ಯಗಳ ಹೇರಿಕೆಯನ್ನು ಕೇಜ್ರಿವಾಲ್ ಅವರು ನಿಲ್ಲಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ. ಇನ್ನೊಂದರ ಅಗತ್ಯವಿಲ್ಲ' ಎಂದು ಅವರು ಹೇಳಿದ್ದಾರೆ.

'ಕರೆನ್ಸಿ ನೋಟುಗಳ ಮೇಲೆ ಎರಡು ದೇವತೆಗಳ ಚಿತ್ರಗಳಿರುವುದು ದೇಶದ ಏಳಿಗೆಗೆ ಸಹಾಯ ಮಾಡುತ್ತದೆ' ಎಂದು ಕೇಜ್ರಿವಾಲ್ ಅವರು ಬುಧವಾರ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: ನೋಟುಗಳಲ್ಲಿ ಲಕ್ಷ್ಮೀ ದೇವಿ, ಗಣೇಶ ಫೋಟೊಗಳನ್ನು ಅಳವಡಿಸುವಂತೆ ಪ್ರಧಾನಿ ಮೋದಿಗೆ ಕೇಜ್ರಿವಾಲ್‌ ಮನವಿ

Similar News