×
Ad

ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ: ಕುತೂಹಲಕಾರಿ ವಿಡಿಯೋ ಹಂಚಿಕೊಂಡ ಕಾಂಗ್ರೆಸ್

Update: 2022-10-28 23:50 IST

ಬೆಂಗಳೂರ: ರಾಜ್ಯದಲ್ಲಿ ನಡೆದ 'ಭಾರತ್ ಜೋಡೊ' ಕೊನೆಯ ದಿನ ಯಾತ್ರೆಯ ವೇಳೆ ನಾಯಕರೊಂದಿಗೆ ರಾಹುಲ್ ಗಾಂಧಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. 

ರಾಹುಲ್ ಗಾಂಧಿ ಅವರು, ಪ್ರಮುಖ ನಾಯಕರ ಸಮ್ಮುಖದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಲ್ಲಿ  ಇಬ್ಬರ ಬಗ್ಗೆಯೂ ಅಭಿಪ್ರಾಯವನ್ನು ಕೇಳುತ್ತಾರೆ. ಆಗ ಇಬ್ಬರೂ ನಾಯಕರು ರಾಹುಲ್ ಪ್ರಶ್ನೆಗೆ ಉತ್ತರಿಸುವುದು ವಿಡಿಯೋದಲ್ಲಿ ದಾಖಲಾಗಿದೆ. 

ಸಿದ್ದರಾಮಯ್ಯನವರ ದೊಡ್ಡ ಶಕ್ತಿ ಏನು ಎಂದು ಡಿಕೆಶಿ ಬಳಿ ಕೇಳಿದಾಗ, 'ಆರಂಭದಿಂದಲೂ ಅವರು ಸಾಮಾಜಿಕ ನ್ಯಾಯದ ಪರ ಇರುವವರು, ಹಿಂದುಳಿದವರ ಪರ ಇರುವವರು' ಎಂದು ಉತ್ತರಿಸಿದ್ದಾರೆ. 

ಡಿಕೆಶಿ ಸ್ಟ್ರೆಂತ್ ಏನು ಎಂದು ಸಿದ್ದರಾಮಯ್ಯ ಬಳಿ ಕೇಳಿದಾಗ,  'ಡಿ.ಕೆ.ಶಿವಕುಮಾರ್ ಒಬ್ಬ ಒಳ್ಳೆಯ ಸಂಘಟಕ ಎಂದಿದ್ದಾರೆ. ಡಿಕೆಶಿ ಪರ್ಸನಲ್ ಸ್ಟ್ರೆಂತ್ ಏನು ಎಂಬ ಮತ್ತೊಂದು ಪ್ರಶ್ನೆಗೆ 'ಸಮಯ ನೋಡದೆ ಕೆಲಸ ಮಾಡುವುದು ಅವರ ಪರ್ಸನಲ್ ಸ್ಟ್ರೆಂತ್' ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ. 

ಸದ್ಯ  ಈ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ' ಭಾರತ ಐಕ್ಯತಾ ಯಾತ್ರೆಯು ಕರ್ನಾಟಕದಲ್ಲಿ ಸಾಗುವ ವೇಳೆಯ ಸುಮಧುರ ಕ್ಷಣಗಳ ಕುರಿತು ರಾಜ್ಯದ ಕಾಂಗ್ರೆಸ್ ನಾಯಕರೊಂದಿಗೆ ಸೇರಿ ಮೆಲುಕು ಹಾಕಿದ ರಾಹುಲ್ ಗಾಂಧಿ' ಎಂದು ಕಾಂಗ್ರೆಸ್ ಬರೆದುಕೊಂಡಿದೆ. 

Similar News