×
Ad

ಮಡಿಕೇರಿ: ಆಟೋ ಚಾಲಕ ಆತ್ಮಹತ್ಯೆ

Update: 2022-10-29 14:27 IST

ಮಡಿಕೇರಿ ಅ.29 (Madikeri):  ನಗರದ ಹೊರವಲಯದಲ್ಲಿರುವ  ಕೂಟುಹೊಳೆಗೆ ಹಾರಿ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. 

ಮಡಿಕೇರಿಯ ಆಝಾದ್ ನಗರದ ನಿವಾಸಿ ಸೈಫುದ್ದೀನ್ (30) ಮೃತ ಆಟೋ ಚಾಲಕ ಎಂದು ತಿಳಿದು ಬಂದಿದೆ. 

ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಬಳಸಿ ಮೃತದೇಹವನ್ನು ಹೊಳೆಯಿಂದ ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: ನ.6ರಂದು ಬೆಂಗಳೂರಿಗೆ ಖರ್ಗೆ, ಅದ್ದೂರಿ ಸ್ವಾಗತಕ್ಕೆ ನಿರ್ಧಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Similar News