'ಲಂಚ ಕೊಡಬೇಡಿ' ಎಂಬ ಬೋರ್ಡ್ ಹಾಕೋದ್ರಿಂದ ಲಂಚ ನಿಲ್ಲುತೆ ಅಂದ್ರೆ, ಮೊದಲು CM ಕಚೇರಿಗೇ ಹಾಕಿಬಿಡಿ: ಪ್ರಿಯಾಂಕ್ ಖರ್ಗೆ

Update: 2022-10-29 11:30 GMT

ಬೆಂಗಳೂರು: ಕಾಸಿಗಾಗಿ ಪೋಸ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಟಿ.ಬಿ. ನಾಗರಾಜ್ ನೀಡಿರುವ ಹೇಳಿಕೆ ಕುರಿತು ಕಾಂಗ್ರೆಸ್‌ ಶಾಸಕ, ಕೆಪಿಸಿಸಿ ಸಂವಹನ ವಿಭಾಗ್ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಶನಿವಾರ ಟ್ವೀಟ್ ಮಾಡಿರುವ ಅವರು,  'ಕೆಲವು ತಿಂಗಳ ಹಿಂದೆ ‘ನಾನು ಭ್ರಷ್ಟನಾಗಲಾರೆ, ನನಗೆ ಯಾರು ಲಂಚ ಕೊಡಬೇಡಿ’ ಎಂಬ ಬೋರ್ಡ್ ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕು ಅಂತ CM ಕಛೇರಿ ಆದೇಶಿಸಿತ್ತು. ಈಗ ಬಿಜೆಪಿ ಸಚಿವರ ಪ್ರಕಾರ ಇನ್ಸ್ ಪೆಕ್ಟರ್ ಹುದ್ದೆಗೆ ₹80 ಲಕ್ಷ ಕೊಡಬೇಕಂತೆ. ಬೋರ್ಡ್ ಹಾಕೋದ್ರಿಂದ ಲಂಚ ನಿಲ್ಲುತೆ ಅಂದ್ರೆ, ಮೊದಲು ಅದನ್ನ CM ಕಛೇರಿ & ಸಚಿವರ ಕಚೇರಿಗೆ ಹಾಕಬೇಕಿದೆ' ಎಂದು ಟೀಕಿಸಿದ್ದಾರೆ. 

'ಸರ್ಕಾರದ ಮಂತ್ರಿಗಳು ತಮ್ಮದೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವಾಗ ಮುಖ್ಯಮಂತ್ರಿಗಳು ಮೌನವಾಗುತ್ತಾರೆ. ಐಟಿ, ಇಡಿ ಈಗ ಎಲ್ಲಿ ಅಡಗಿವೆ? ಎಂದು ಪ್ರಶ್ನಿಸಿದ್ದಾರೆ. ಎಂ.ಟಿ.ಬಿ. ನಾಗರಾಜ್ ಅವರ ಸಂಭಾಷಣೆಯನ್ನು ಗಮನಿಸಿದರೆ #PayCM ದರ ನಿಗದಿ ಮಾಡಿರುವುದು ಸ್ಪಷ್ಟವಾಗಿ ತೋರುತ್ತದೆ' ಎಂದು, ಮತ್ತೊಂದು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಎಂ.ಟಿ.ಬಿ. ನಾಗರಾಜ್ ಅವರ ಮಾತನಾಡುವ ವಿಡಿಯೋವನ್ನು ಪ್ರಿಯಾಂಕ್ ಖರ್ಗೆ ಅವರು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ:  ಪತ್ರಕರ್ತರಿಗೆ ಲಂಚ ನೀಡಿದ ಆರೋಪ: ಸಿಎಂ ಬೊಮ್ಮಾಯಿ, ಮಾಧ್ಯಮ ಸಂಯೋಜಕರ ವಿರುದ್ಧ ಲೋಕಾಯುಕ್ತಕ್ಕೆ ದೂರು

Similar News