ತಿ.ನರಸೀಪುರ | ಟ್ರ್ಯಾಕ್ಟರ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು

Update: 2022-10-29 17:10 GMT

ತಿ.ನರಸೀಪುರ, ಅ.29: ಜೋಳ ಒಕ್ಕಣೆ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಕೂಲಿಕಾರ್ಮಿಕರು ಮೃತಪಟ್ಟಿರುವ ಘಟನೆ ತಾಲೂಕಿನ ಚಿಟಗಯ್ಯನಕೊಪ್ಪಲು ಗ್ರಾಮದ ಬಳಿ ಶನಿವಾರ ವರದಿಯಾಗಿದೆ.

ಮೃತರನ್ನು ಬೂದಳ್ಳಿ ಗ್ರಾಮದ ಪ್ರಕಾಶ್(19), ಸಂತೋಷ್(29), ಮರೀಜೋಗಿ(44) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ತಿ.ನರಸೀಪುರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೂವರ ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Similar News