×
Ad

ಪರಿಷತ್ತಿನ ಸಚಿವಾಲಯದ ಹಳೆಯ ವಾಹನಗಳ ಹರಾಜು

Update: 2022-10-31 23:28 IST

ಬೆಂಗಳೂರು, ಅ. 31: ವಿಧಾನ ಪರಿಷತ್ತಿನ ಸಚಿವಾಲಯದ ಹಳೆಯ ವಾಹನಗಳನ್ನು ಅವು ಯಾವ ಸ್ಥಿತಿಯಲ್ಲಿವೆಯೋ ಹಾಗೆಯೇ ನ.17ರ ಬೆಳಗ್ಗೆ 11 ಗಂಟೆಗೆ ಶಾಸಕರ ಭವನ-6 4ನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಸಾರ್ವಜನಿಕ ಹರಾಜಿನಲ್ಲಿ ವಿಲೇವಾರಿ ಮಾಡಲಾಗುವುದು.

ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವವರು, ಅರ್ಜಿ ಶುಲ್ಕ 200 ರೂ.ನ್ನು ಕ್ಷೇತ್ರಾಧಿಕಾರಿ, ಶಾಸಕರ ಭವನ ಇವರಿಗೆ ಸಂದಾಯ ಮಾಡಿ, ಅರ್ಜಿ ಪಡೆದು ನಂತರ 20ಸಾವಿರ ರೂ.ಗಳ ನಗದು/ಡಿ.ಡಿ.ಯನ್ನು ಕಾರ್ಯದರ್ಶಿ, ವಿಧಾನ ಪರಿಷತ್ತು, ವಿಧಾನಸೌಧ ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ನ.15ರ ಮಧ್ಯಾಹ್ನ 3ಗಂಟೆಯೊಳಗಾಗಿ ಕ್ಷೇತ್ರಾಧಿಕಾರಿ, ಶಾಸಕರ ಭವನ ವಿಧಾನ ಪರಿಷತ್ತು, ಇವರಿಗೆ ನೀಡಬೇಕು. ನಂತರ ಸಾರ್ವಜನಿಕ ಹರಾಜಿನಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹಾಗೂ ವಾಹನ ಪರಿವೀಕ್ಷಣೆಗಾಗಿ ಕ್ಷೇತ್ರಾಧಿಕಾರಿ, ಶಾಸಕರ ಭವನ, ಕರ್ನಾಟಕ ವಿಧಾನ ಪರಿಷತ್ತು, ಇವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ವಿಧಾನಪರಿಷತ್ತಿನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News