ಮಡಿಕೇರಿ: ಅಪಘಾತದಲ್ಲಿ ಯುವಕ ಮೃತ್ಯು
Update: 2022-11-01 17:27 IST
ಮಡಿಕೇರಿ ನ.1: ನಿಂತಿದ್ದ ವಾಹನಕ್ಕೆ ದ್ವಿಚಕ್ರ ವಾಹನ ಢಿಕ್ಕಿಯಾದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಸಿದ್ದಾಪುರ ಪಟ್ಟಣದಲ್ಲಿ ನಡೆದಿದೆ.
ಸಿದ್ದಾಪುರ ಪಂಚಾಯತ್ ವ್ಯಾಪ್ತಿಯ ಗೂಡುಗದ್ದೆ ನಿವಾಸಿ ಬಶೀರ್ ಎಂಬುವವರ ಪುತ್ರ ಸಲ್ಮಾನ್ (19) ಮೃತಪಟ್ಟಿರುವ ಯುವಕನಾಗಿದ್ದು, ಸ್ಥಳೀಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸಲ್ಮಾನ್, ಮಂಗಳವಾರದಂದು ಸಿದ್ದಾಪುರ ಸಮೀಪದ ಅಂಬೇಡ್ಕರ್ ನಗರದಿಂದ ಸಿದ್ದಾಪುರಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ. ಈ ಸಂದರ್ಭ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಇದರಿಂದ ತೀವ್ರ ಗಾಯಗೊಂಡ ಸಲ್ಮಾನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಸಿದ್ದಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.