ಪುನೀತ್ ರಾಜ್‌ಕುಮಾರ್ ಸೇರಿದಂತೆ ಈವರೆಗಿನ "ಕರ್ನಾಟಕ ರತ್ನ" ಪುರಸ್ಕೃತರು ಯಾರ್ಯಾರು?; ಪಟ್ಟಿ ಇಲ್ಲಿದೆ...
ಬೆಂಗಳೂರು, ನ.1: ಒಂದು ವರ್ಷದ ಹಿಂದೆ ಅಗಲಿದ ನಟ ಡಾ.ಪುನೀತ್ ರಾಜಕುಮಾರ್ ಅವರಿಗೆ ನಾಡಿನ ಪ್ರತಿಷ್ಠಿತ 10ನೇ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ಮರಣೋತ್ತರವಾಗಿ ಪುನೀತ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪ್ರದಾನಿಸಲಾಯಿತು.
ರಾಜ್ಯೋತ್ಸವದ ದಿನವಾದ ಇಂದು 13 ವರ್ಷಗಳ ಬಳಿಕ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಕರ್ನಾಟಕ ರತ್ನ’ ಪ್ರದಾನಿಸಲಾಯಿತು. ಈ ಪ್ರಶಸ್ತಿಯೂ 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ ಒಂದು ಶಾಲನ್ನು ಒಳಗೊಂಡಿದೆ.
ಇನ್ನು 'ಕರ್ನಾಟಕ ರತ್ನ' ಪ್ರಶಸ್ತಿಯನ್ನ ಇಲ್ಲಿಯವರೆಗೆ 10 ಸಾಧಕರಿಗೆ ನೀಡಲಾಗಿದ್ದು, ಅದರ ಪಟ್ಟಿ ಇಲ್ಲಿದೆ...
►► ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
► ಕುವೆಂಪು-ಸಾಹಿತ್ಯ-1992
► ಡಾ.ರಾಜ್‍ಕುಮಾರ್-ಸಿನೆಮಾ-1992
► ಎಸ್.ನಿಜಲಿಂಗಪ್ಪ-ರಾಜಕೀಯ-1999
► ಸಿ.ಎನ್.ಆರ್.ರಾವ್-ವಿಜ್ಞಾನ-2000
► ದೇವಿಪ್ರಸಾದ್ ಶೆಟ್ಟಿ-ವೈದ್ಯಕೀಯ-2001
► ಪಂ.ಭೀಮಸೇನ ಜೋಷಿ-ಸಂಗೀತ-2005
►ಶ್ರೀ ಶಿವಕುಮಾರ ಸ್ವಾಮೀಗಳು-ಸಮಾಜ ಸೇವೆ-2007
► ದೇ.ಜವರೇಗೌಡ-ಸಾಹಿತ್ಯ-2008
► ಡಿ.ವೀರೇಂದ್ರ ಹೆಗ್ಗಡೆ-ಸಾಮಾಜಿಕ ಸೇವೆ-2009
► ದಿ.ಪುನೀತ್ ರಾಜ್‍ಕುಮಾರ್- ಸಿನಿಮಾ-2022