ಖ್ಯಾತ ಕಥೆಗಾರ ಕುಕ್ಕರಹಳ್ಳಿ ಬಸವರಾಜು ನಿಧನ

Update: 2022-11-03 17:58 GMT

ಮೈಸೂರು,ನ.3:  ಖ್ಯಾತ ಕಥೆಗಾರ, ಲೇಖಕ, ರಂಗಕರ್ಮಿ ಕುಕ್ಕರಹಳ್ಳಿ ಬಸವರಾಜು ಅವರು ಗುರುವಾರ ಮಧ್ಯಾಹ್ನ ನಿಧರಾಗಿದ್ದಾರೆ.

ಮೈಸೂರು ನಗರದ ಕುಕ್ಕರಹಳ್ಳಿಯಲ್ಲಿ ಧನಗಳ್ಳಿ ಸಿದ್ದಯ್ಯ ಮತ್ತು ನಿಂಗಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದರು. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅವರು ಮೈಸೂರಿನ ಮಹರಾಜ ಪದವಿ ಪೂರ್ವ ಕಾಲೇಜು ಮತ್ತು ಮರಿಮಲ್ಲಪ್ಪನವರ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದ್ದರು. ಪದವಿ ಓದುತ್ತಿದ್ದಾಗಲೇ ಸ್ಟೂಡೆಂಟ್ ಫಾರ್ ಡೆಮಾಕ್ರಸಿ  ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿ ದುಡಿದಿದ್ದರು. ಎಂಸಿಡಿಸಿಸಿ ಬ್ಯಾಂಕ್‍ನ ಸೀನಿಯರ್ ಮ್ಯಾನೇಜರ್ ಅನೂಪ್ ಎಸ್.ಬಸು ಇವರ ಪುತ್ರರಾಗಿದ್ದಾರೆ. ಇವರ ಅಂತ್ಯಕ್ರಿಯೆಯು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದ ವಿದ್ಯುತ್  ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಶಸ್ತಿಗಳು: ಕುಕ್ಕರಹಳ್ಳಿ ಬಸವರಾಜು ಅವರಿಗೆ 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ. 2003 ರಲ್ಲಿ ವಿಶ್ವನಾಥ್ ಕೆ.ವಾರಂಬಳ್ಳಿ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ, 2016 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ದೊರೆತಿದೆ. 2016 ರ  ಡಿಸೆಂಬರ್ 12 ರಂದು ನಡೆದ ಮಯಸೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Similar News