ತುಮಕೂರು | ತಾಯಿ, ಅವಳಿ ಮಕ್ಕಳು ಸಾವು ಪ್ರಕರಣ: ಜಿಲ್ಲಾಸ್ಪತ್ರೆಯ ವೈದ್ಯೆ ಸೇರಿ ನಾಲ್ವರು ಅಮಾನತು

Update: 2022-11-03 18:57 GMT

ತುಮಕೂರು,ನ.3: ಸಕಾಲದಲ್ಲಿ ತುಂಬು ಗರ್ಭಿಣಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೇ ಇದ್ದರಿಂದ ಗರ್ಭಿಣಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯೆ ಸೇರಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ. 

ತುಮಕೂರು ಜಿಲ್ಲಾ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ. ಉಷಾ ಎ.ಆರ್ ಹಾಗೂ ಶುಶ್ರೂಷಾಧಿರಿಕಾರಿಗಳಾದ  ಯಶೋಧ ಬಿ.ವೈ. ,  ಸವಿತ,  ದಿವ್ಯ ಭಾರತಿ ಎಂಬುವರ ವಿರುದ್ಧ ಕರ್ತವ್ಯ ಲೋಪ ಹಾಗೂ ದುರ್ನಡತೆ ತೋರಿಸಿರುವುದರಿಂದ, ಇಲಾಖಾ ವಿಚಾರಣೆ ಬಾಕಿ ಇರಿಸಿ  ತಕ್ಷಣದಿಂದ ಜಾರಿಗೆ ಬರುವಂತೆ, ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ. 

ನಗರದ ಭಾರತಿ ನಗರದಲ್ಲಿ ವಾಸವಾಗಿದ್ದ ಕಸ್ತೂರಿ ಎಂಬಾಕೆ ಪ್ರಸವ ಬೇನೆಯಿಂದ ಜಿಲ್ಲಾಸ್ಪತ್ರೆಗೆ ತಡರಾತ್ರಿ ಹೋದಾಗ, ಅಲ್ಲಿನ ಸಿಬ್ಬಂದಿ ಚಿಕಿತ್ಸೆ ನೀಡದೇ ಆಕೆಯನ್ನು ವಾಪಸ್ ಕಳುಹಿಸಿದ್ದಾರೆ. ಮನೆಗೆ ಬಂದ ಬಳಿಕ ನೋವು ವಿಪರೀತವಾಗಿ ಹೆರಿಗೆಯಾಗಿದ್ದು, ತಾಯಿ, ಅವಳಿ ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ಮನೆಯಲ್ಲೇ ಹೆರಿಗೆ ಬಳಿಕ ತಾಯಿ, ಅವಳಿ ಮಕ್ಕಳು ಸಾವು

Similar News