ಮಾಜಿ ಸಚಿವ ಈಶ್ವರಪ್ಪ ಫೋಟೊ ಇರುವ ಕರೆನ್ಸಿ ನೋಟು ಬಿಡುಗಡೆ ಮಾಡಿದ ಕಾಂಗ್ರೆಸ್‌!

Update: 2022-11-04 12:32 GMT

ಬೆಂಗಳೂರು: ಮಾಜಿ ಸಚಿವ, ಶಾಸಕ ಕೆ.ಎಸ್ ಈಶ್ವರಪ್ಪ ಅವರ ಫೋಟೊ ಹಾಕಿ ಕರೆನ್ಸಿ ನೋಟ್‌ವೊಂದನ್ನು ಸಿದ್ಧಪಡಿಸಿರುವ ಕಾಂಗ್ರೆಸ್‌, ಅದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಅದರಲ್ಲಿ ‘ಭ್ರಷ್ಟ ಜನತಾ ಪಕ್ಷ ಅಂದರೆ ಕುದುರೆ ವ್ಯಾಪಾರ’, ‘ಆಪರೇಷನ್ ಕಮಲ ಕರೆನ್ಸಿ’ ಎಂದು ಮುದ್ರಿಸಿದೆ. 

''ಕೆ.ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ಶಾಸಕರಿಗೆ 500 ಕೋಟಿ ಆಮಿಷ ಒಡ್ಡಿದ್ದೆ ಎಂದು ಹೇಳಿರುವುದರಲ್ಲಿ ಯಾವ ಆಶ್ಚರ್ಯ, ಅನುಮಾನಗಳೂ ಇಲ್ಲ. ತೆಲಂಗಾಣದಲ್ಲಿ 150 ಕೋಟಿಯ ಡೀಲ್‌ನಲ್ಲೂ ನಿಮ್ಮದೇ ನೋಟ್ ಎಣಿಸುವ ಮಿಷನ್ ಕೆಲಸ ಮಾಡಿತ್ತೆ ಈಶ್ವರಪ್ಪನವರೇ? 40% ಕಮಿಷನ್ ಲೂಟಿಯನ್ನು ಕರ್ನಾಟಕದ ನಂತರ ತೆಲಂಗಾಣದಲ್ಲಿ ಇನ್ವೆಸ್ಟ್ ಮಾಡ್ತಿದೀರಾ?'' ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. 

''ಸಿಎಂ ಹುದ್ದೆಗೆ 2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ 500 ಕೋಟಿ ಹೆಚ್ಚಲ್ಲ ಅಲ್ಲವೇ ಬಿಜೆಪಿ? ಈಶ್ವರಪ್ಪ ಅವರೇ, ನೋಟ್ ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲದ 500 ಕೋಟಿ ಎಣಿಸುವುದಕ್ಕಾ, 40% ಕಮಿಷನ್ ಲೂಟಿಯ ಹಣ ಎಣಿಸುವುದಕ್ಕಾ? 500 ಕೋಟಿ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ?'' ಎಂದೂ ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

Similar News